ಜಗಳೂರಿನಲ್ಲಿ 11 ತಿಂಗಳ ಮಗುವಿನೊಂದಿಗೆ ತಾಯಿ ನೇಣು ಬಿಗಿದು ಆತ್ಮಹತ್ಯೆ!
ದಾವಣಗೆರೆ: 11 ತಿಂಗಳ ಪುಟ್ಟ ಮಗುವಿನೊಂದಿಗೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ನಡೆದಿದೆ. ಜಗಳೂರು ಪಟ್ಟಣದ ಜೆ.ಸಿ.ಆರ್ ಬಡಾವಣೆಯ 13 ವಾರ್ಡ್ನಲ್ಲಿ ಈ ಘಟನೆ ನಡೆದಿದ್ದು, ನೋಡುಗರ ಹೃದಯ ಹಿಂಡುವ0ತಿದೆ. ತಾಯಿ ನಿಕಿತ ಅವರಿಗೆ 22 ವರ್ಷವಾಗಿತ್ತು. ಇನ್ನೂ ವರ್ಷ ತುಂಬದ 11 ತಿಂಗಳ ಮಗುವಿನೊಂದಿಗೆ ನೇಣು ಬಿಗಿದುಕೊಂಡಿದ್ದು ನೋಡುಗರ ನೋವು ಮುಗಿಲುಮುಟ್ಟುವಂತಿತ್ತು. ನಿಕಿತ ಅವರ ಪತಿ ಮನೋಜ್ ಕುಮಾರ್ ದಾವಣಗೆರೆ ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
garudavoice21@gmail.com 9740365719