Mp gms petrol: ಪೆಟ್ರೊಲ್ ದರ್ ಏರಿಕೆಗೆ ಮಾರ್ಮಿಕ ಉತ್ತರ ನೀಡಿದ ಸಂಸದರು: ಚಡ್ಡಿ ಹಾಕಿದ್ದಾಗ ಬೆಲೆ ಕಮ್ಮಿ ಇತ್ತು.! ಪ್ಯಾಂಟ್ ಹಾಕ್ತೀದಿನಿ ಬೆಲೆ ಜಾಸ್ತಿಯಾಗಿದೆ

ದಾವಣಗೆರೆ: ನಾನು ಚಡ್ಡಿ ಹಾಕಿಕೊಳ್ಳುವಾಗ ಪೆಟ್ರೋಲ್, ಡೀಸೆಲ್ ಸೇರಿ ಬೇರೆಲ್ಲ ವಸ್ತುಗಳ ಬೆಲೆ ಕಡಿಮೆ ಇತ್ತು, ಆದರೆ ಈಗ ನಾನು ಪ್ಯಾಂಟ್ ಹಾಕಿಕೊಳ್ಳುತ್ತಿದ್ದೇನೆ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗಿದೆ ಎಂದು ಸಂಸದ ಸಿದ್ದೇಶ್ವರ್ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಮಾರ್ಮಿಕವಾಗಿ ಉತ್ತರಿಸಿದರು‌.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ವಾತಾವರಣಕ್ಕೆ ತಕ್ಕಂತೆ, ದಿನ ಕಳೆದಂತೆ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಅದು ಸರ್ವೇ ಸಾಮಾನ್ಯ ಎಂದರು.

ಈಗಾಗಲೇ ಜನರು ಕರೋನಾದಿಂದ ಬೇಸತ್ತಿದ್ದು, ಮತ್ತೆ ಬಂದ್ ಗಳನ್ನು ಮಾಡಿದರೆ ಜನರಿಗೆ ಆರ್ಥಿಕ ಹೊಡೆತ ಬೀಳಲಿದೆ. ಎಲ್ಲವೂ ರೈತರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದು, ರೈತರು ಯಾರೊಬ್ಬರು ಈ ಕಾಯ್ದೆಗಳನ್ನು ವಿರೋಧಿಸುತ್ತಿಲ್ಲ, ಸಂಘಟನೆಯವರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಬಂದ್ ಆಚರಿಸುವುದರಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ಹೆಚ್ಚು ತೊಂದರೆಯಾಗಲಿದ್ದು, ಈ ಬಂದ್ ಗಳನ್ನು ಕೈಬಿಡುವುದು ಸೂಕ್ತ ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!