ಹೋರಿ ಬೆದರಿಸುವ ಸಂದರ್ಭದಲ್ಲಿ ಯುವಕ ಸಾವು.! ರೇಣುಕಾಚಾರ್ಯರಿಂದ ಕುಟುಂಬಕ್ಕೆ ಸಾಂತ್ವಾನ

ಹೋರಿ ಬೆದರಿಸುವ ಸಂದರ್ಭದಲ್ಲಿ ಯುವಕ ಸಾವು.! ರೇಣುಕಾಚಾರ್ಯರಿಂದ ಕುಟುಂಬಕ್ಕೆ ಸಾಂತ್ವಾನ
ದಾವಣಗೆರೆ: ಹೋರಿ ಬೆದರಿಸುವ ಸ್ಪರ್ಧೆ ನಮ್ಮ ಸಂಪ್ರದಾಯಕ ಕ್ರೀಡೆಗಳಲ್ಲಿ ಒಂದು, ಆದ್ರೆ ಇತ್ತೀಚಿಗೆ ಹೋರಿ ಬೆದರಿಸುವ ಸ್ಪರ್ಧೆಯಿಂದ ಸಾವು ನೋವುಗಳು ಸಂಭವಿಸುತ್ತಿವೆ.
ನೆನ್ನೆ ಶಿಕಾರಿಪುರ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ನನ್ನ ಮತ ಕ್ಷೇತ್ರದ ಹೆಚ್. ಕಡದಕಟ್ಟೆ ಗ್ರಾಮದ 23 ವರ್ಷದ ಯುವಕ ರಾಕೇಶ್ ಅವರು ಮೃತ ಪಟ್ಟಿದ್ದು ಮನಸ್ಸಿಗೆ ತುಂಬಾ ನೋವುಂಟು ಮಾಡಿತು.
ತಂದೆಯನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ರಾಕೇಶ್ ಅವರ ಸಾವು ತುಂಬಲಾರದ ನಷ್ಟವಾಗಿದೆ. ಇಂದು ಮೃತ ರಾಕೇಶ್ ಅವರು ಅಂತಿಮ ದರ್ಶನ ಪಡೆದು, ಕೈಲಾದ ಧನಸಹಾಯ ಮಾಡಿ ಕುಟುಂಬದ ಸದಸ್ಯರುಗಳಿಗೆ ಸಾಂತ್ವನ ಹೇಳಿದೆ.
ನನ್ನ ಮತ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಹೋರಿ ಬೆದರಿಸವ ಸ್ಪರ್ಧೆ ಜಾರಿಯಲ್ಲಿದ್ದು ಸಾರ್ವಜನಿಕ ಬಂಧುಗಳು ಇಂತಹ ಘಟನೆಗಳಿಂದ ಜಾಗೃತರಾಗ ಬೇಕೆಂದು ವಿನಂತಿಸಿಕೊಳ್ಳುತ್ತೇನೆ.