ಮತಾಂತರ ಹೆಸರಿನಲ್ಲಿ ದೌರ್ಜನ್ಯ: ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ದಿಂದ ಶಾಂತಿಯುತ ಕಾನೂನು ಹೋರಾಟ

ದಾವಣಗೆರೆ :ರಾಜ್ಯದಲ್ಲಿ ಕ್ರೈಸ್ತ ಜನಾಂಗದವರು ಸಮಾಜದಲ್ಲಿನ ಇತರೆ ಜನಾಂಗದವರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಗಳು ಬರುತ್ತಿವೆ. ಅಲ್ಲದೆ ಆಸೆ ಆಮಿಷಗಳನ್ನು ಒಡ್ಡಿ ಬಲವಂತದ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ ಆದರೆ ನಮ್ಮ ಸಮಾಜದಿಂದ ಯಾವುದೇ ಬಲವಂತದ ಅಥವಾ ಆಮಿಷಕ್ಕೆ ಒಡ್ಡಿ ಮತಾಂತರ ಮಾಡಲಾಗುತ್ತಿಲ್ಲ ಎಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ ನ ರಾಜ್ಯಧ್ಯಕ್ಷ ಬಿ ರಾಜಶೇಖರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೆ ಕಳೆದ 23ರಂದು ವಿಧಾನಸಭೆಯ ಅಧಿವೇಶನದ ಶೂನ್ಯವೇಳೆಯಲ್ಲಿ ಹೊಸದುರ್ಗದ ಶಾಸಕ ಗೂಳಿಹಟ್ಟಿ ಶೇಖರ್, ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಕಾರಣ ಈ ಕೂಡಲೇ ಅವರ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಕ್ರೈಸ್ತ ಸಮುದಾಯದಿಂದ ಹೋರಾಟ ಮಾಡುತ್ತೇವೆ. ಅಲ್ಲದೆ ಈ ಅವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಅಧಿವೇಶನದಲ್ಲಿ ಒಂದು ಸಮುದಾಯವನ್ನೇ ಪ್ರತ್ಯೇಕಿಸಿ ಗುರಿಯಾಗಿ ಇರಿಸಿಕೊಂಡು ಅವಮಾನ ಮಾಡಲಾಗಿದ್ದು, ಕರ್ನಾಟಕದ ಎಲ್ಲ ಕ್ರೈಸ್ತ ಸಮುದಾಯವನ್ನೇ ಅವಮಾನಿಸಿದಂತೆ ಆಗಿದೆ. ಕಾರಣ ರಾಜ್ಯದ ಎಲ್ಲ ಕ್ರೈಸ್ತ ಸಮುದಾಯ ಅವರ ಹೇಳಿಕೆಯನ್ನು ಖಂಡಿಸುತ್ತದೆ ಅಲ್ಲದೇ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಮುನ್ನ ಆ ವಿಷಯವಾಗಿ ಸವಿಸ್ತಾರವಾಗಿ ಚರ್ಚಿಸಬೇಕು ಅಲ್ಲದೆ ರಾಜಕೀಯ ಮುಖಂಡರು ವಿರೋಧ ಪಕ್ಷಗಳ ವಿಶ್ವಾಸವನ್ನು ಪಡೆದು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಭಾರತದಲ್ಲಿ ವಾಸ ಮಾಡುವ ನಾವೆಲ್ಲ ಭಾರತೀಯರೇ ನಾವೇನು ವಿದೇಶಿಗರಲ್ಲ. ನಾವು ಮತಾಂತರ ಮಾಡುತ್ತಿಲ್ಲ. ವಿನಾಕಾರಣ ನಮ್ಮಗಳ ಮೇಲೆ ಮತಾಂತರದ ಆರೋಪ ಬರುತ್ತಿದೆ. ನಾವು ಮೌನವಾಗಿ ಇದ್ದೇವೆ ಎಂದರೆ ಸುಮ್ಮನಿದ್ದೆವೆ ಎಂದಲ್ಲ. ಈ ಹಿನ್ನೆಲೆಯಲ್ಲಿ ಇತರ ಧರ್ಮಗಳು ನಮ್ಮ ಮೇಲೆ ವಿನಾಕಾರಣ ದಾಳಿ ನಡೆಸುತ್ತಿವೆ. ಅಲ್ಲದೇ ನಮ್ಮ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿ ಅವ್ಯಾಚ್ಯವಾಗಿ ನಿಂದಿಸಿ, ಅಲ್ಲಿನ ವಸ್ತುಗಳನ್ನು ಅಪವಿತ್ರಗೊಳಿಸುವುದು ಮತ್ತು ಬೈಬಲನ್ನು ಸುಟ್ಟುಹಾಕುವಂತಹ ಕೆಲಸಕ್ಕೆ ಕೈಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಹೀಗೆ ನಮ್ಮ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳ ಮುಂದುವರೆದಲ್ಲಿ ನಾವು ಶಾಂತಿಯುತ ಹೋರಾಟ ಹಾಗೂ ಕಾನೂನುಬದ್ಧ ಹೋರಾಟಗಳನ್ನು ಮಾಡುತ್ತೇವೆ ಎಂದರು
ನಾವು ಸಂವಿಧಾನ ಬದ್ಧವಾಗಿಯೇ ನಡೆದುಕೊಳ್ಳುತ್ತಿದ್ದೇವೆ. ಯಾವುದೇ ಜನಾಂಗ ಸಂಘಟನೆ ಧಾರ್ಮಿಕ ಕೇಂದ್ರಗಳಲ್ಲಿ ಕೇಂದ್ರಗಳ ಮೇಲೆ ನಾವು ದಾಳಿ ನಡೆಸಿಲ್ಲ. ಎಲ್ಲಾ ಕಾನೂನನ್ನು ನಾವು ಗೌರವಿಸುತ್ತೇವೆ. ಕಾರಣ ನಮ್ಮನ್ನು ಗೌರವಿಸಿ ಸಂವಿಧಾನದಂತೆ ನಮ್ಮನ್ನು ಬದುಕಲು ಬಿಡಿ ಇಲ್ಲವಾದಲ್ಲಿ ನಾವು ಸಹ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚೆಲುವರಾಜ್, ಜೇಕಬ್, ಬನಿಯನ್ ಸುಮಿತ್ ಅಲೆಗ್ಸಾಂಡರ್, ಸುಜಾತಾ ಜೋಸೆಫ್, ಡೆನ್ಸಿಲ್.ಎ ಎಂ ಇದ್ದರು