ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್; ಮೇ 7 ರಂದು ದಾವಣಗೆರೆ ಕ್ಷೇತ್ರಕ್ಕೆ ಚುನಾವಣೆ

el1

ನವದೆಹಲಿ: ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಕೇಂದ್ರ ಚುನಾವಣಾ ಆಯೋಗ ಎಲೆಕ್ಷನ್​ ಡೇಟ್​ ಅನೌನ್ಸ್​ ಮಾಡಿದೆ.

ಇನ್ನು, ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಜಗತ್ತಿನ ಅತೀ ದೊಡ್ಡ ಮತದಾನಕ್ಕೆ ಭಾರತ ಸಿದ್ಧವಾಗಿದೆ. ಈ ಬಾರಿ 97 ಕೋಟಿಗೂ ಹೆಚ್ಚು ಜನ ಮತದಾನ ಮಾಡಲಿದ್ದಾರೆ. ಸುಮಾರು 11 ಲಕ್ಷ ಆಸುಪಾಸು ಮತಗಟ್ಟೆಗಳಲ್ಲಿ ವೋಟಿಂಗ್​ ಆಗಲಿದೆ. 1.5 ಕೋಟಿ ಸಿಬ್ಬಂದಿ ಮತಗಟ್ಟೆ ನಿರ್ವಹಣೆ ಮಾಡಲಿದ್ದಾರೆ ಎಂದರು.

ಪ್ರಜಾಪ್ರಭುತ್ವದ ಹಬ್ಬಕ್ಕೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿ ಷರಾ ಬರೆದಿದೆ. ಈ ಮೂಲಕ ಇಂದಿನಿಂದ ಲೋಕಸಭೆ ಚುನಾವಣೆಯ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಮೊದಲ ಹಂತದ ಮತದಾನ ಏಪ್ರಿಲ್​ 19ನೇ ತಾರೀಕು ನಡೆಯಲಿದ್ದು, ಜೂನ್​​ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಎಪ್ರಿಲ್ 26 ರಂದು 14 ಕ್ಷೇತ್ರ ಹಾಗೂ ಮೇ 7 ರಂದು 14 ಕ್ಷೇತ್ರ ಒಟ್ಟು 28 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಎಪ್ರಿಲ್ 26 ರಂದು ನಡೆಯುವ ಚುನಾವಣೆಯ ಕ್ಷೇತ್ರಗಳ ವಿವರ:

ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಉತ್ತರಕನ್ನಡ, ದಕ್ಷಿಣಕನ್ನಡ, ಕೋಲಾರ, ಚಿಕ್ಕಬಳ್ಳಾಪುರ.

ಮೇ 7 ರಂದು ನಡೆಯುವ ಚುನಾವಣೆಯ ಕ್ಷೇತ್ರಗಳ ವಿವರ:

ಬೆಳಗಾವಿ, ಬಳ್ಳಾರಿ, ಚಿಕ್ಕೋಡಿ, ಹಾವೇರಿ-ಗದಗ, ಕಲಬುರಗಿ, ಬೀದರ್​, ಹುಬ್ಬಳಿ – ಧಾರವಾಡ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ವಿಜಯಪುರ.

ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಏಪ್ರಿಲ್ 26ರಂದು ಎರಡನೇ ಹಂತದಲ್ಲಿ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೇ 7ರಂದು ಮೂರನೇ ಹಂತದಲ್ಲಿ 94 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೇ 13ರಂದು ನಾಲ್ಕನೇ ಹಂತದಲ್ಲಿ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೇ 20 ರಂದು ಐದನೇ ಹಂತದಲ್ಲಿ 49 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಮೇ 25ರಂದು ಆರನೇ ಹಂತದಲ್ಲಿ 56 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಜೂನ್ 1ರಂದು ಏಳನೇ ಹಂತದಲ್ಲಿ 57 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

Leave a Reply

Your email address will not be published. Required fields are marked *

error: Content is protected !!