Muder Jail: ಪ್ರಿತೀಸಿ ಮದುವೆಯಾದ ತಪ್ಪಿಗೆ ಯುವತಿ ಕಡೆಯವರಿಂದಲೇ ಕೊಲೆಯಾದ: ಆರೋಪಿತ ಮೂವರಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ದಾವಣಗೆರೆ: ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಓಡಿಹೋಗಿ ವಿವಾಹವಾಗಿದ್ದ ಯುವಕನನ್ನು ಕೊಲೆಗೈದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವತಿಯ ತಾಯಿ, ಸಹೋದರ ಸೇರಿದಂತೆ ಮೂವರಿಗೆ ಇಲ್ಲಿನ ಒಂದನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ನೀಡಿ ತೀರ್ಪು ನೀಡಿದ್ದು, ಮುಖ್ಯ ಆರೋಪಿಯಾಗಿದ್ದ ಯುವತಿಯ ಸಹೋದರನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ., ದಂಡ ವಿಧಿಸಿ ತೀರ್ಪು ನೀಡಿದೆ.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ದುರುಗಮ್ಮ, ತಿಮ್ಮೇಶ್ ಮತ್ತು ಭವಾನಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಕಳೆದ 2019ರಂದು ಹಿಂದೆ ಮೃತ ಹಾಲೇಶ್ ಅಪರಾಧಿ ದುರುಗಮ್ಮನ ಮಗಳು ಭಾರತಿಯನ್ನು ಪ್ರೀತಿಸಿ ಕರೆದೊಯ್ದು ಮದುವೆ ಮಾಡಿಕೊಂಡಿದ್ದ. ಈ ದ್ವೇಷದ ಕಾರಣಕ್ಕಾಗಿ ದುರುಗಮ್ಮ ಹಾಗೂ ಆಕೆಯ ಮಗಳು ಭವಾನಿ ಅವರು ಹಾಲೇಶನೊಂದಿಗೆ ಜಗಳ ಮಾಡುತ್ತಿದ್ದ ವೇಳೆ ಭಾರತಿಯ ಸಹೋದರ ತಿಮ್ಮೇಶ ಹಾಲೇಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು.
ಪ್ರಕರಣ ಕುರಿತು ಮೃತ ಹಾಲೇಶನ ತಾಯಿ ಬಸಮ್ಮ ಹರಿಹರ ಠಾಣೆಗೆ ದೂರು ನೀಡಿದ್ದರು.ದೂರಿನ ಹಿನ್ನಲೆಯಲ್ಲಿ ವೃತ್ತ ನಿರೀಕ್ಷಕ ಗುರುನಾಥ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಜಿಲ್ಲಾ ಹಾಗು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ ವಿಜಯಾನಂದ ಅವರು ತಿಮ್ಮೇಶನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡ, ದಂಡ ಪಾವತಿ, ತಪ್ಪಿದಲ್ಲಿ 3 ತಿಂಗಳು ಸಜೆ, ದುರುಗಮ್ಮ ಹಾಗೂ ಭವಾನಿ ಅವರಿಗೆ 1 ತಿಂಗಳ ಸಜೆ, ತಲಾ 250 ದಂಡ, ತಪ್ಪಿದಲ್ಲಿ 10 ದಿನ ಸಜೆ . ಕಲಂ , 323 ಐ.ಪಿ.ಸಿ ಗೆ 6 ತಿಂಗಳು ಸಜೆ 500, ದಂಡ ತಪ್ಪಿದಲ್ಲಿ 3 ತಿಂಗಳು ಸಜೆ, 324 ಐಪಿಸಿಗೆ 1 ವರ್ಷ ಸಜೆ 1000 ರೂ ದಂಡ ತಪ್ಪಿದಲ್ಲಿ 2 ತಿಂಗಳು ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿತರು ಸೆರೆವಾಸದಲ್ಲಿದ್ದ ಅವಧಿಯನ್ನು ಹೊಂದಾಣಿಕೆ ಮಾಡಲು ಆದೇಶ ನೀಡಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.