ಮುರುಘಾ ಶ್ರೀ ಜೈಲಿನಿಂದ ಬಿಡುಗಡೆಯಾಗಿ ದಾವಣಗೆರೆಗೆ ಆಗಮನ; ಜೈಲಲ್ಲಿ 4-5 ಬುಕ್ ಬರೆದಿದ್ದೆನೆ ಸಕಾಲದಲ್ಲಿ ಬಿಡುಗಡೆ
ದಾವಣಗೆರೆ: ಫೋಕ್ಸೋ ಕೇಸ್ ನಲ್ಲಿ ಬಂಧಿಯಾಗಿದ್ದ ಚಿತ್ರದುರ್ಗದ ಮುರುಘಾ ಶರಣರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಬಂಧಿಖಾನೆಯಿಂದ ಮುರುಘಾ ಶ್ರೀಗಳು ಅಕ್ಟೋಬರ್ 7 ರಂದು ಬಿಡುಗಡೆ ಆಗಿದ್ದಾರೆ.
ಜೈಲಿಂದ ಬಿಡುಗಡೆಯಾಗಿ ನಗು ಮುಖದಿಂದ ಸ್ವಾಮೀಜಿ ಹೊರ ಬಂದಿದ್ದಾರೆ. ಈ ವೇಳೆ ಸ್ವಾಮೀಜಿ ಹೊರ ಬರುತ್ತಿದ್ದಂತೆ ಬಸವಪ್ರಭು ಸ್ವಾಮೀಜಿ ಹಾಗೂ ಮಠದ ಮರಿ ಸ್ವಾಮಿ ಬಸವಾಧಿತ್ಯ ಕಾಲಿಗೆ ನಮಸ್ಕರಿಸಿದರು ಇದೇ ಸಂಧರ್ಭದಲ್ಲಿ ಹಾರ ಹಾಕಿ, ಶ್ರೀಗಳ ಪರ ಜೈಕಾರ ಕೂಗಿದರು.
ಜೈಲಿನಿಂದ ದಾವಣಗೆರೆಯ ಜಯದೇವ ವೃತ್ತದ ಮುರುಘಮಠಕ್ಕೆ ಆಗಮಿಸಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾಧ್ಯಮದವರ ಜೊತೆ ನಗುತ್ತಲೆ ಎಲ್ಲರ ಪ್ರಶ್ನೆಗಳಿಗೆ ಸಮಾಧಾನದಿಂದ ಮಾತನಾಡಿದರು.
ಜೈಲಿನಲ್ಲಿ ಈ ಹಿಂದೆ 250 ಕ್ಕೂ ಹೆಚ್ಚು ಪುಸ್ತಕಗಳನ್ನು ಓದಿದ್ದೆ ಈ ಭಾರಿ 150 ಪುಸ್ತಕಗಳನ್ನು ಓದಿ ಸಮಯವನ್ನು ಸದ್ಬಳಕೆ ಮಾಡಿಕೊಂಡಿದ್ದೆನೆ ಹಾಗೂ 4-5 ಪುಸ್ತಕಗಳನ್ನು ಬರೆದಿದ್ದೆನೆ ಎಲ್ಲ ಪುಸ್ತಕಗಳನ್ನು ಸಕಾಲದಲ್ಲಿ ಒಟ್ಟಿಗೆ ಬಿಡುಗಡೆ ಮಾಡಲಾಗುವುದು ಎಂದು ಮುರುಘಾ ಶರಣರು ಹೇಳಿದರು.
ಮುರುಗೇಶೇನ ದಯೆಯಿಂದ ಬಿಡುಗಡೆ ಆಗಿದ್ದು, ಕಾನೂನು ಹೋರಾಟದಲ್ಲಿ ಗೆಲ್ಲುವ ವಿಶ್ವಾಸವಿದೆ, ಸತ್ಯಕ್ಕೆ ಜಯದ ವಿಶ್ವಾಸವಿದೆ ಎಂದರು. ಭಕ್ತರಿಗೆ ದಾವಣಗೆರೆಯ ಮಠದಲ್ಲಿ ನಮ್ಮ ದರ್ಶನಕ್ಕೆ ಅವಕಾಶವಿದೆ ಎಂದಿದ್ದಾರೆ.
ಒಟ್ಟಾರೆ ಎರಡನೇ ಬಾರಿ ಜೈಲಿಗೆ ತೆರಳಿದ್ದ ಮುರುಘಾ ಶರಣರು ಮಾಧ್ಯಮದವರ ಜೊತೆ ಪುಸ್ತಕ ಬರೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಏನೆಲ್ಲಾ ವಿಚಾರಗಳನ್ನು ಬರೆದಿದ್ದಾರೆ ಎಂಬ ಕುತೂಹಲಕಾರಿ ಅಂಶಗಳು ಯಾವಾಗ ಬೆಳಕಿಗೆ ಬರುತ್ತದೆ ಎಂದು ಕಾದು ನೋಡಬೇಕಿದೆ.