ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್ ಗಳ 4 ತಿಂಗಳ ಬಾಡಿಗೆಯನ್ನ ಮನ್ನಾ ಮಾಡಲು ವಕ್ಫ್ ಬೋರ್ಡ್ ಗೆ ಮನವಿ
ದಾವಣಗೆರೆ: ಕರ್ನಾಟಕ ರಾಜ್ಯ ವಕ್ಫ್ ಸದಸ್ಯರು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎಸ್. ಆಸಿಫ್ ಅಲಿ ಅವರು ಮುಸ್ಲಿಂ ಹಾಸ್ಟೆಲ್ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಬಾಡಿಗೆದಾರರ ಕುಂದು ಕೊರತೆಗಳ ವಿಷಯವಾಗಿ ಚರ್ಚೆ ನಡೆಸಿದರು.
ಮುಸ್ಲಿಂ ಹಾಸ್ಟೆಲ್ ಕಟ್ಟಡದಲ್ಲಿ ಇರುವ ಬಾಡಿಗೆದಾರರು ಸರ್ಕಾರವು ಲಾಕ್‌ಡೌನನ್ನು ಆನ್‌ಲಾಕ್ ಮಾಡಿದ ನಂತರವೂ ಕೂಡ ಇಲ್ಲಿಯವರೆಗೆ ವ್ಯಾಪರಸ್ಥರಿಗೆ ತಮ್ಮ ಕುಟುಂಬದ ನಿರ್ವಹಣೆಗೆ ಸಾಲುವಷ್ಟು ಕೂಡ ವ್ಯವಹಾರ ನಡೆಯುತ್ತಿಲ್ಲ ಎಂದು ಅಸಹಾಯಕತೆಯನ್ನು ತೋಡಿಕೊಂಡರು.
ಪ್ರಸ್ತುತ ಈ ವರ್ಷ ಲಾಕ್ಡೌನ್ ಸಮಯದ ನಂತರದ ಒಟ್ಟು 4 ತಿಂಗಳುಗಳ ಬಾಡಿಗೆಯನ್ನು ಮನ್ನಾ ಮಾಡಲು ಇವರ ಮೂಲಕ ವಕ್ಫ್ ಬೋರ್ಡ್ ಗೆ ಮನವಿ ಮಾಡಿಕೊಳ್ಳಲಾಯಿತು.
ಬಾಡಿಗೆದಾರರ ಬೇಡಿಕೆಗೆ ಸ್ಪಂದಿಸಿ ಆಸಿಫ್ ಅಲಿಯವರು ರಾಜ್ಯ ಮಂಡಳಿಯಲ್ಲಿ ಚರ್ಚೆ ಮಾಡಿ ನ್ಯಾಯ ಒದಗಿಸಿಕೊಡುವುದಾಗಿ ಆಶ್ವಾಸನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮತ್ತೊಬ್ಬ ಸದಸ್ಯರಾದ ಕೋಟೇಶ್ವರ್ ರಾವ್, ಹಿರಿಯ ವಕೀಲರಾದ ಅನೀಸ್ ಪಾಷ, ಬಾಡಿಗೆದಾರರುಗಳಾದ ಬಾಷಾ ಸಾಬ್, ಫಯಾಜ್, ಟೈಲರ್ ಇಬ್ರಾಹಿಂ, ನಯಾಜ್, ಹಬೀಬ್ ರಹಮಾನ್ ಮತ್ತಿತರರು ಉಪಸ್ಥಿತರಿದ್ದರು.