ನನ್ನ ಸೊಸೆ ಸ್ಪರ್ಧೆ ಮಾಡೋದಿಲ್ಲ.! ಊಹಾಪೋಹಕ್ಕೆ ತೆರೆ ಎಳೆದ ಡಾ.ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಚುನಾವಣೆಯಲ್ಲಿ ನಮ್ಮ ಮನೆ ಹೆಣ್ಣುಮಕ್ಕಳು ಸ್ಪರ್ಧಿಸಲ್ಲ ಎನ್ನುವ ಮೂಲಕ ತಮ್ಮ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಊಹಾಪೋಹಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತೆರೆ ಎಳೆದಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಯಾರು ಬೇಕಾದರು ಟಿಕೆಟ್‌ಗೆ ಅರ್ಜಿ ಸಲ್ಲಿಸಲಿ. ಶಕ್ತಿ ಇದ್ದವರು ನಿಲ್ಲುತ್ತಾರೆ, ಮತ ಸಿಕ್ಕವರು ಗೆಲ್ಲುತ್ತಾರೆ. ನಮ್ಮ ಮನೆಯಿಂದಂತೂ ಯಾವುದೇ ಹೆಣ್ಣುಮಕ್ಕಳು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದರು. ಸಿದ್ದರಾಮಯ್ಯ ಸೇರಿದಂತೆ ಎಲ್ಲ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರ ಹೆಸರು ಘೋಷಿಸುತ್ತಾರೆ. ಯಾವುದೇ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಅಧಿಕತವಾಗಿ ಅಭ್ಯರ್ಥಿಯನ್ನು ಘೋಷಿಸುವವರೆಗೆ ಯಾವುದೂ ನಿಜವಲ್ಲ. ಯಾರು ಏನೇ ಹೆಸರು ಘೋಷಣೆ ಮಾಡಿದರೂ ಪಕ್ಷ ಘೋಷಿಸಿದ ಮೇಲೆ ಅಥವಾ B-FARM ಕೊಟ್ಟ ಮೇಲೆಯೇ ಅಧಿಕತವಾಗಿ ಅಭ್ಯರ್ಥಿಯಾಗುತ್ತಾರೆ. ಜಿಲ್ಲೆಯ ಎಲ್ಲ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಕೆಲ ಜಿಲ್ಲಾ ಅಧ್ಯಕ್ಷರು ಅಧಿವೇಶನದ ಸಂಘಟನೆಗೆ ಲಭ್ಯವಿರುವ ಸಮಯ ಕಡಿಮೆ ಎಂದು ತಿಳಿಸಿದ್ದರು. ಸಾರ್ವಜನಿಕ ವಲಯದಿಂದಲೂ ಮುಂದೂಡಿವಿಕೆಯ ಬಗ್ಗೆ ಹೆಚ್ಚು ಒಲವು ಕಂಡ ಬಂದ ಹಿನ್ನೆಲೆಯಲ್ಲಿ ಅಧಿವೇಶನವನ್ನ ಮುಂದೂಡಲಾಗಿದೆ. ಅಧಿವೇಶನವನ್ನು ರದ್ದುಪಡಿಸಿಲ್ಲ ಮುಂದೂಡಲಾಗಿದೆ ಅಷ್ಟೇ ಎಂದು ಸ್ಪಷ್ಟ ಪಡಿಸಿದರು. ಮುಂದಿನ 2023ರ ಫೆಬ್ರವರಿ 11ರಿಂದ 13ರವರೆಗೆ ಅದೇ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಇನ್ನೂ ಹೆಚ್ಚಿನ ಹುರುಪು, ವೈಭವದಿಂದ 23ನೇ ಅಧಿವೇಶನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಹಾಸಭಾದ ಎಸ್.ಎಸ್.ಗಣೇಶ್, ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ರೇಣುಕ ಪ್ರಸನ್ನ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಶುಭ ಐನಳ್ಳಿ, ನಿರ್ಮಲಾ ಸುಭಾಷ್, ಬಿ.ಜಿ. ರಮೇಶ್ ಇತರರು ಇದ್ದರು.

 
                         
                       
                       
                       
                       
                       
                       
                      