ನನ್ನ ಮನೆ ನನ್ನ ಸ್ವಚ್ಚತೆ! ಪ್ರಜಾಕಾರ್ಮಿಕನ challenge accepte  ಮಾಡ್ಕೋತೀರಾ? ಜನರಿಂದಲೇ ಚರಂಡಿ ಸ್ವಚ್ಚತೆ ಜನರಿಗೆ ಜನರ ಹಣ!

ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ: ನನ್ನ ಮನೆ ನನ್ನ ಸ್ವಚ್ಚತೆ ಎಂಬ ಘೋಷವಾಕ್ಯದಡಿ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್‌ಕುಮಾರ್ ಚರಂಡಿ ಸ್ವಚ್ಚತೆಯನ್ನು ಜನರಿಂದಲೇ ಮಾಡಿಸಿ, ಚರಂಡಿ ಸ್ವಚ್ಚತೆಗೆ ಬರುವ ಅನುದಾನವನ್ನು ಚರಂಡಿ ಸ್ವಚ್ಚಗೊಳಿಸುವ ಜನರಿಗೆ ನೀಡುವ ಮೂಲಕ ಜನರ ತೆರಿಗೆ ಹಣ ಜನರಿಗೆ ವಿನಿಯೋಗಿಸುವ ಒಂದು ವಿನೂತನ ಕಾರ್ಯಕ್ಕೆ ಕೈಹಾಕಿದ್ದಾರೆ.

2022-23ನೇ ಸಾಲಿನಲ್ಲಿ ಕಾರಿಗನೂರು ಗ್ರಾಮ ಪಂಚಾಯ್ತಿಯಿ0ದ ಅರೇಹಳ್ಳಿ ಗ್ರಾಮಕ್ಕೆ 2 ಲಕ್ಷಗಳ ಅನುದಾನ ಚರಂಡಿ ಸ್ವಚ್ಚತೆಗಾಗಿ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಚೇತನ್ ಕುಮಾರ್ ಅವರ 4ನೇ ವಾರ್ಡಿಗೆ 75 ಸಾವಿರ ರೂಗಳನ್ನು ಮೀಸಲಿಡಲಾಗಿದೆ. ನನ್ನ ಮನೆ ನನ್ನ ಸ್ವಚ್ಚತೆ ಘೋಷವಾಕ್ಯದಡಿ ತನ್ನ ವ್ಯಾಪ್ತಿಯ ಜನರೊಂದಿಗೆ ಚರ್ಚಿಸಿ, ಪೋಲಿಂಗ್ ಮಾಡುವ ಮೂಲಕ ಈ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುತ್ತದೆ.

 

 

2021-22ನೇ ಸಾಲಿನಿಂದ ನನ್ನಮನೆ ನನ್ನ ಸ್ವಚ್ಚತೆ ಘೋಷ ವಾಕ್ಯದಡಿ ಜನರಿಂದಲೇ ಚರಂಡಿ ಸ್ವಚ್ಚತೆ ಕಾರ್ಯಕೈಗೊಳ್ಳಲಾಗುತ್ತಿದ್ದು, 2021-22ರಲ್ಲಿ ಅರೇಹಳ್ಳಿ ಗ್ರಾಮಕ್ಕೆ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ ಅನುದಾನ ಬಿಡುಗಡೆಯಾಗಿತ್ತು. 4ನೇ ವಾರ್ಡಿಗೆ 25 ಸಾವಿರ ರೂ. ಮೀಸಲಿಡಲಾಗಿತ್ತು. ಜನರಿಂದಲೇ ಚರಂಡಿ ಸ್ವಚ್ಚತೆ ಕೈಗೊಂಡು ಜನರ ತೆರಿಗೆ ಹಣ ಜನರಿಗೆ ಕೂಲಿ ರೂಪದಲ್ಲಿ ನೀಡಲಾಗಿತ್ತು. ಇದೀಗ 2022-23ನೇ ಸಾಲಿನಲ್ಲಿಯೂ ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲಾಗುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಅಷ್ಟೇಅಲ್ಲದೆ ಪ್ರಜಾಕಾರ್ಮಿಕನ ಈ ಕಾರ್ಯವನ್ನು ದಾವಣಗೆರೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳು ಯಾಕೆ ಮಾಡಬಾರದು ಎಂಬ ಪ್ರಶ್ನೆ ಕೂಡಾ ಉದ್ಬವಿಸಿದೆ.

ನನ್ನ ಮನೆ ನನ್ನ ಸ್ವಚ್ಚತೆ ಏನಿದು?:
ಜನರಿಗೆ ತಮ್ಮ ಮನೆ, ಅಕ್ಕಪಕ್ಕದ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಅರಿವು ಮೂಡಿಸುವ ಸಲುವಾಗಿ ತಮ್ಮ ಮನೆಯ ಹಿಂದೆ ಅಥವಾ ಮುಂದಿರುವ ಚರಂಡಿಯನ್ನು ಗ್ರಾಮಸ್ಥರೆಲ್ಲ ಸೇರಿ ಏಕಕಾಲಕ್ಕೆ ಸ್ವಚ್ಚತೆಗೊಳಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಜನರಿಂದಲೇ ಚರಂಡಿ ಸ್ವಚ್ಚತೆ ಕೆಲಸ ಮಾಡಿಸಿ, ಬಂದ ಅನುದಾನವನ್ನು ಎಷ್ಟು ಕುಟುಂಬದ ಜನರು ಕೈಗೊಳ್ಳುತ್ತಾರೋ ಅಷ್ಟು ಜನರಿಗೆ ಇಂತಿಷ್ಟು ಹಣವನ್ನು ಗೌರವಪೂರ್ವಕವಾಗಿ ನೀಡಲಾಗುತ್ತದೆ. ಇದರಿಂದ ಜನರ ತೆರಿಗೆ ಹಣ ಜನರಿಗೆ ತಲುಪಿಸುವಂತಾಗಲಿದೆ. ಈ ಹಿಂದೆ ಚರಂಡಿ ಸ್ವಚ್ಚತೆ ಕಾರ್ಯವನ್ನು ಕಾಂಟ್ರಾಕ್ಟರ್‌ಗೆ ನೀಡಿ ಬಂದ ಅನುದಾನದಲ್ಲಿ ಒಂದೆರೆಡು ದಿನ ಕೆಲವೇ ಬೇರೆ ಜನರನ್ನು ಕರೆತಂದು ಸ್ವಚ್ಚತೆ ಮಾಡಿಸಿ, ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು, ಇದೀಗ ಕೊನೆಯ ಪಕ್ಷ ಚರಂಡಿ ಸ್ವಚ್ಚತೆ ಕಾರ್ಯದ ಹಣವಾದರೂ ಜನರೇ ತಲುಪುತ್ತಿರುವುದು ಸಂತಸದ ವಿಚಾರವೇ ಸರಿ.

2021-22ರಲ್ಲಿ ನನ್ನ ಮನೆ ನನ್ನ ಸ್ವಚ್ಚತೆ ಯಶಸ್ವಿ ಕಂಡಿತ್ತೇ?:
2021-22ನೇ ಸಾಲಿನಲ್ಲಿ ಈ ನನ್ನ ಮನೆ ನನ್ನ ಸ್ವಚ್ಚತೆ ಕಾರ್ಯ ಯಶಸ್ವಿ ಕಂಡಿತ್ತೇ? ಎಂಬ ಪ್ರಶ್ನೆ ಉದ್ಬವಿಸುವುದು ಸಹಜ. ಅದಕ್ಕೆ ಉತ್ತರ ಹೌದು. 2021-22ನೇ ಸಾಲಿನಲ್ಲಿ ಮೊದಲ ಬಾರಿಗೆ ಜನರ ಕೈಯಿಂದಲೇ ಅವರವರ ಮನೆಯ ಚರಂಡಿ ಸ್ವಚ್ಚತೆಯನ್ನು ಅವರಿಂದಲೇ ಮಾಡಿಸಲಾಗಿತ್ತು. ಪೊಲಿಂಗ್ ಮಾಡುವ ಮೂಲಕ ಈ ಕಾರ್ಯಕ್ಕೆ ಅರೇಹಳ್ಳಿ ಗ್ರಾಮದ 4ನೇ ವಾರ್ಡಿನ ಜನ ಅಭೂತಪೂರ್ವ ಬೆಂಬಲ ನೀಡಿದ್ದರು.

2021-22ರ ಲೆಕ್ಕ!:
2021-22ನೇ ಸಾಲಿನಲ್ಲಿ ನನ್ನ ಮನೆ ನನ್ನ ಸ್ವಚ್ಚತೆ ಘೋಷ ವಾಕ್ಯದಡಿಯಲ್ಲಿ ಜನರೇ ಚರಂಡಿ ಸ್ವಚ್ಚ ಮಾಡಿದ್ದು, ಕಾರಿಗನೂರು ಗ್ರಾಮ ಪಂಚಾಯ್ತಿಯಿ0ದ 25 ಸಾವಿರ ರೂ. ಹಣ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಜಿಎಸ್‌ಟಿ 1ರಷ್ಟು ಕಮಿಷನ್ 5 ಸಾವಿರ ತೆಗೆದು 20 ಸಾವಿರ ರೂ. ಉಳಿದಿತ್ತು. ಗ್ರಾಮದಲ್ಲಿನ ಜನವಸತಿ ಇಲ್ಲದ ಕಡೆ ಇರುವ ಮುಖ್ಯ ಚರಂಡಿ ತೆಗೆಯಲು 28 ಆಳುಗಳಿಗೆ 350 ರೂ. ಕೂಲಿ ಹಾಗೂ 30 ತಿಂಡಿ, ಒಟ್ಟು 380 ರಂತೆ 28 ಕಾರ್ಮಿಕರಿಗೆ 10.640 ರೂ. ಕೂಲಿ ವೆಚ್ಚವಾಗಿತ್ತು. ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ಗೆ 350ರೂ. ಚರಂಡಿ ಸ್ವಚ್ಚಗೊಳಿಸುವ ಪರಿಕರಗಳಿಗೆ 1450 ರೂ. ಟ್ರ್ಯಾಕ್ಟರ್ ಬಾಡಿಗೆ 2 ಸಾವಿರ ಸೇರಿ ಒಟ್ಟು 14.440 ರೂ.ಗಳಾಗಿತ್ತು.

ಇನ್ನೂ ಗ್ರಾಮದ ಜನ ತಮ್ಮ ಮನೆ ಮುಂದಿರುವ ಚರಂಡಿ ಸ್ವಚ್ಚತೆ ಮಾಡಿದ್ದು, 37 ಕುಟುಂಬಗಳಿಗೆ, ಕುಟುಂಬಕ್ಕೆ 150 ರೂ. ನೀಡಲಾಗಿದ್ದು, 5550 ರೂಗಳಾಗಿತ್ತು. ಒಟ್ಟು 19 ಸಾವಿರದ 990 ರೂ. ವೆಚ್ಚವಾಗಿತ್ತು. ಜಿಎಸ್‌ಟಿ 5 ಸಾವಿರ ರೂ ಸೇರಿಸಿ 24990 ರೂ.ಗಳಿಗೆ ಚರಂಡಿ ಸ್ವಚ್ಚತೆ ಕಾರ್ಯ ಕೈಗೊಳ್ಳಲಾಗಿತ್ತು. ಇದೀಗ ಇದೇ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯ್ತಿಗಳು ಯಾಕೆ? ಪಾರದರ್ಶಕತೆಯಿಂದ ಪ್ರತಿ ಕೆಲಸ ಕೈಗೊಳ್ಳಬಾರದು. ಇದರಿಂದ ಜನರ ತೆರಿಗೆ ಹಣ ಜನರಿಗೆ ತಲುಪಿಸಿದಂತಾಗುವುದಿಲ್ಲವೇ?

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!