Gm Siddeshwar:ಮೈಸೂರಿನ ದೇವಸ್ಥಾನ ಒಡೆದ ಘಟನೆ ಆಕಸ್ಮಿಕ: ಅದನ್ನು ನಾವು ಕೂಡ ಖಂಡಿಸುತ್ತೇವೆ – ಜಿ ಎಂ ಸಿದ್ದೇಶ್ವರ

ದಾವಣಗೆರೆ: ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು ಎಂದು ಕಾಂಗ್ರೆಸ್ ನವರು ಮಾತ್ರ ಹೇಳುತ್ತಾರೆ. ಬಿಜೆಪಿ ಯಾವಾಗಲೂ ಹಿಂದುತ್ವದ ಪರವಾಗಿ ಇರುತ್ತೇವೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಒಡೆಯಲಾಗಿರುವ ಧಾರ್ಮಿಕ ಕೇಂದ್ರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,2011 ರಿಂದ 21 ರ ಒಳಗೆ ರಸ್ತೆ ಅಡ್ಡವಾಗಿ ಅಲ್ಲಿ ಇಲ್ಲಿ ಆಗಿರುವ ದೇವಸ್ಥಾನಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಹೇಳಿದರು.
ಈಗ ನಡೆದಿರುವ ಘಟನೆ ಆಕಸ್ಮಿಕ ವಾಗಿದ್ದು, ಅದನ್ನು ನಾವು ಕೂಡ ಖಂಡಿಸುತ್ತೇವೆ. ದೇವಸ್ಥಾನಗಳನ್ನು ಒಡೆಯಬಾರದು, ಕ್ರಮ ಕೈಗೊಳ್ಳುವ ಮುನ್ನ ಶಾಸಕ, ಸಂಸದರು ಹಾಗು ಜನರನ್ನು ಅಲ್ಲಿನ ಜಿಲ್ಲಾಡಳಿತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ಇದು ಆಕಸ್ಮಿಕವಾಗಿ ಆಗಿರುವ ಘಟನೆಯಾಗಿದ್ದು, ಮುಂದೆ ಹೀಗೆ ನಡೆಯದ ಹಾಗೆ ಮುಖ್ಯಮಂತ್ರಿ ಗಳು ನೋಡಿಕೊಳ್ಳುತ್ತಾರೆ. ಈಗ ದೇವಾಲಯ ತೆರವುಗೊಳಿಸುವ ಬಗ್ಗೆಯೂ ಸಿಎಂ ಕ್ರಮ ಕೈಗೊಳ್ಳುತ್ತಾರೆ ಎಂದರು.
ಮಸೀದಿಯ ಮೇಲೆ ಮೈಕ್ ಹಾಕುವ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಅದೇಶವಾಗಿದೆ. ಮುಸ್ಲಿಂಮರು, ಅಲ್ಪ ಸಂಖ್ಯಾತರು ಅವರ ಧಾರ್ಮಿಕ ವಿಚಾರವಾಗಿ ಹೋಗುವಾಗ ಚರ್ಚೆ ಮಾಡಬೇಕು. ಎಲ್ಲರ ಸಹಕಾರ ತೆಗೆದುಕೊಂಡು ಹೋಗಬೇಕು, ಇಲ್ಲ ಅಂದ್ರೆ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಎಂದು ಮಾಧ್ಯಮದವರೆ ಹೇಳುತ್ತಾರೆ ಎಂದರು.