ಕಾ|| ಎನ್. ಶಿವಣ್ಣ ನಿಧನ! ಮೃತರ ದೇಹ ದಾನ

ದಾವಣಗೆರೆ: ಕಾಮ್ರೆಡ್ ಎನ್. ಶಿವಣ್ಣ ಅವರು ಬೆಂಗಳೂರಿನ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಮ್ರೇಡ್ ಎನ್. ಶಿವಣ್ಣ ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರ ಪಾರ್ಥೀವ ಶರೀರವನ್ನು ಬೆಂಗಳೂರು ಮಲ್ಲೇಶ್ವರಂನ 16ನೇ ಕ್ರಾಸ್ನಲ್ಲಿರುವ ಸಿಪಿಐ ರಾಜ್ಯ ಮಂಡಳಿ ಕಚೇರಿ ಘಾಟೆ ಭವನದಲ್ಲಿ ಇಂದು ಮಧ್ಯಾಹ್ನ 4 ಗಂಟೆಯಿ0ದ ಸಂಜೆ 5 ಗಂಟೆವರೆಗೆ ಸಾರ್ವಜನಿಕವಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರು ದೇಹದಾನ ಮಾಡಬೇಕೆಂದು ಇಚ್ಛಿಸಿದ್ದ ಮೇರೆಗೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಎನ್. ಶಿವಣ್ಣ ಅವರ ಮೃತ ದೇಹವನ್ನು ದಾನವಾಗಿ ನೀಡಲಾಗುತ್ತದೆ ಎಂದು ಅವರ ಕುಟುಂಬದ ಸದಸ್ಯರು ತಿಳಿಸಿರುವುದಾಗಿ ಸಿಪಿಐನ ದಾವಣಗೆರೆ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.

 
                         
                       
                       
                       
                       
                       
                       
                      