ನಾಳೆ ದವನ್ ಕಾಲೇಜ್ ವತಿಯಿಂದ ಸಿಎ ತರಬೇತಿ ಪ್ರಯುಕ್ತ ಜೂಮ್ ಆಪ್ ನಲ್ಲಿ ಮೀಟಿಂಗ್

ದಾವಣಗೆರೆ: ಸ್ಫೂರ್ತಿ ಎಜ್ಯುಕೇಶನಲ್ ಟ್ರಸ್ಟ್ನ ದವನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ವತಿಯಿಂದ ಜು.24 ರ ಇಂದು ಬೆಳಿಗ್ಗೆ 11 ಗಂಟೆಗೆ ದವನ್ ಸಿಎ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ಇಲ್ಲಿನ ದವನ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಸಿಎ ಅಸೋಸಿಯೇಷನ್ ನ ಅಧ್ಯಕ್ಷ ಸಿಎ ಕೀರಣ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ನೂತನ ವಿದ್ಯಾಸಂಸ್ಥೆ ಅಧ್ಯಕ್ಷರಾದ ಎನ್. ಪರಶುರಾಮಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಸಿಎ ಶ್ರೀರಾಮ್ ವಂಶಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಟೇಲ್, ನಿರ್ದೇಶಕ ಹರ್ಷರಾಜ್ ಎ. ಗುಜ್ಜಾರ್, ನೂತನ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಸ್. ಹಾಲಪ್ಪ, ದವನ್ ಕಾಲೇಜಿನ ಪ್ರಾಚಾರ್ಯರಾದ ಹೆಚ್.ಸಿ. ಅಶ್ವಿನಿ, ಸಿಎ ಸಂಯೋಜಕರಾದ ಕೆ.ಟಿ. ಸುಮಿತ್ರ, ಉಪನ್ಯಾಸಕರಾದ ಅಲ್ಮಸ್ ಬಾನು ಉಪಸ್ಥಿತರಿರುವರು.
ಆಸಕ್ತರು ಜೂಮ್ ಆಪ್ ಮೀಟಿಂಗ್ ಐಡಿ: 7026225550, ಪಾಸ್‌ವರ್ಡ್: davan ಮೂಲಕ ಭಾಗವಹಿಸಲು ದವನ್ ಕಾಲೇಜಿನ ಪ್ರಾಚಾರ್ಯರಾದ ಹೆಚ್.ಸಿ. ಅಶ್ವಿನಿ ತಿಳಿಸಿದ್ದಾರೆ.