ನಾಲಿಗೆ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಕಾಲ ಅಡಗಿಸಿಟ್ಟುಕೊಳ್ಳುವ ಕೌಶಲ ಶ್ರೀಹರ್ಷನ ಕೌಶಲ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ

IMG_20210702_144558

 

ಚಿತ್ರದುರ್ಗ.ಜು.೨;  ಚಿತ್ರದುರ್ಗದ ಡೌನ್‍ಬಾಸ್ಕೊ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಹೆಚ್.ವೈ.ಶ್ರೀಹರ್ಷ ಅವರು ತನ್ನ ನಾಲಿಗೆಯ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಹೆಚ್ಚು ಹೊತ್ತು ಅಡಗಿಸಿಟ್ಟುಕೊಳ್ಳುವ ಕೌಶಲವು 2021ರ ‘ಇಂಡಿಯಾ ಬುಕ್ ಆಫ್ ರೆಕಾಡ್ಸ್’ನಲ್ಲಿ ದಾಖಲಾಗಿದೆ.
ಶ್ರೀಹರ್ಷ ಅವರು ಹೆಚ್ಚು ಕಾಲ ಅಂದರೆ 1 ನಿಮಿಷ 22 ಸೆಕೆಂಡುಗಳ ಕಾಲ ನಾಲಿಗೆಯ ತುದಿಯನ್ನು ಕಿರುನಾಲಿಗೆಯ ಹಿಂದಕ್ಕೆ ಅಡಗಿಸಿಟ್ಟುಕೊಂಡಿರುವುದು ದಾಖಲೆ ವಿಷಯವಾಗಿದೆ ಎಂದು ಇಂಡಿಯಾ ಬುಕ್ ರೆಕಾರ್ಡ್ ಅವರು ಈ ಬಗ್ಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕಗಳನ್ನು ಮನೆಗೆ ಕಳಹಿಸಿಕೊಟ್ಟಿದ್ದಾರೆ.

“ಮುಂದಿನ ದಿನಗಳಲ್ಲಿ ಈ ಕೌಶಲವನ್ನು ಏಷ್ಯಾಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ಗೆ ಕಳುಹಿಸಿ, ಅಲ್ಲಿಯೂ ಕೂಡ ಸ್ಥಾನ ಪಡೆಯುವ ಅಭಿಲಾಷೆ ಹೊಂದಿದ್ದೇನೆ. ಅದಕ್ಕಾಗಿ ನಿತ್ಯವೂ ಅಭ್ಯಾಸದಲ್ಲಿ ತೊಡಗಿದ್ದು, ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು ಎನ್ನುವ ಆಸೆ ಇದೆ” ಎನ್ನುತ್ತಾರೆ ಶ್ರೀಹರ್ಷ.
ಶ್ರೀಹರ್ಷ ಅವರು ಇತ್ತೀಚೆಗೆ ನಡೆದ ಜೀನಿಯಸ್ ಸೆರೆಬ್ರಮ್ ಇಂಟರ್ ನ್ಯಾಷನಲ್ ಒಲಂಪಿಯಾಡ್ಸ್-2021ರ ಪರೀಕ್ಷೆಯ ಲೇವಲ್-3ರಲ್ಲಿ ಇಂಟರ್ ನ್ಯಾಷನಲ್‍ನಲ್ಲಿ 456ನೇ ರ್ಯಾಂಕ್ ಹಾಗೂ ರಿಜಿನಲ್ ರ್ಯಾಂಕ್‍ನಲ್ಲಿ 259ನೇ ಸ್ಥಾನ ಪಡೆದಿದ್ದಾರೆ.
ಶ್ರೀಹರ್ಷ ತುರುವನೂರು ಹೋಬಳಿಯ ಟಿ.ಉಪ್ಪಾರಹಟ್ಟಿ ಗ್ರಾಮದ ಹೆಚ್.ಯರ್ರಿಸ್ವಾಮಿ ಮತ್ತು ಮಮತಾರಾಣಿ ಅವರ ಪುತ್ರನಾಗಿದ್ದು, ಕುಟುಂಬ ಸಮೇತ ಈಗ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!