ನಗರದಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಣಿ ಸಭೆಗೆ ಶುಭಾಶಯಗಳು – ಕೆ.ಎಲ್.ಹರೀಶ್ ಬಸಾಪುರ

 

ದಾವಣಗೆರೆ: ನಗರದ ತ್ರಿಶೂಲ ಕಲ್ಯಾಣ ಮಂಟಪದಲ್ಲಿ ದಿನಾಂಕ 18 ಮತ್ತು 19 ರಂದು ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಶುಭಾಶಯಗಳು, ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರು ಕಳೆದ ತಿಂಗಳು ಅನಧಿಕೃತ ಫ್ಲೆಕ್ಸ್ ಗಳನ್ನು ಹಾಕಬಾರದು ಎಂದು ಆದೇಶ ಹೊರಡಿಸಿದ್ದು, ಅಧಿಕಾರದಲ್ಲಿರುವ ಆಡಳಿತ ಪಕ್ಷ ತಮ್ಮ ಅಧಿಕಾರಿಗಳ ಆದೇಶಕ್ಕೆ ಗೌರವ ನೀಡದೆ ಇರುವುದು ಮಾತ್ರ ವಿಪರ್ಯಾಸ….

ಮಾನ್ಯ ಮಹಾನಗರ ಪಾಲಿಕೆ ಆಯುಕ್ತರು ತಮ್ಮ ಆದೇಶಗಳು ಕೇವಲ ವಿರೋಧ ಪಕ್ಷದವರಿಗೆ ಹಾಗೂ ಸಾಮಾನ್ಯ ಜನರಿಗೆ ಮಾತ್ರ ಸೀಮಿತವೇ ಅಥವಾ ಆಡಳಿತ ಪಕ್ಷದ ನಾಯಕರುಗಳಿಗೂ ಅನ್ವಯಿಸುತ್ತದೆಯೇ ಎಂಬುದನ್ನು ತಿಳಿಸಬೇಕಾಗಿದೆ.

ಬಿಜೆಪಿ ನಾಯಕರು ನಗರದ ಎಲ್ಲ ಲಾಡ್ಜ್ ಗಳಲ್ಲಿ 400 ರೂಂ ಗಳನ್ನೂ ಕಾಯ್ದಿರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಸಭೆಗೆ ಕೋಟ್ಯಾಂತರ ರು ಖರ್ಚು ಮಾಡಲಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ, ಇಷ್ಟೆಲ್ಲದರ ನಡುವೆ ಪಾಲಿಕೆಗೆ ಪಾವತಿಸಬೇಕಾದ ಶುಲ್ಕ ಪಾವತಿಸಿ ಫ್ಲೆಕ್ಸ್ ಹಾಕಿಸಿದ್ದಾರೆ ಪಾಲಿಕೆಗದರೂ ಆದಾಯ ಬರುತ್ತಿತ್ತು ಹಾಗೂ ಶುಲ್ಕ ಪಾವತಿಸಿ ಎಲ್ಲರೂ ಫ್ಲಕ್ಸ್ ಹಾಕಿಸಿ ಎಂಬ ಸಂದೇಶವಾದರೂ ನೀಡಬಹುದಿತ್ತಲ್ಲವೆ ????

ಕೆ.ಎಲ್.ಹರೀಶ್ ಬಸಾಪುರ

Leave a Reply

Your email address will not be published. Required fields are marked *

error: Content is protected !!