ನಾಳೆ ದಾವಣಗೆರೆ ತಾಲ್ಲೂಕಿನಲ್ಲಿ ಗರ್ಭಿಣಿಯರು, ಬಾಣಂತಿಯರು, ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಉಚಿತ ಲಸಿಕೆ
ದಾವಣಗೆರೆ: ದಾವಣಗೆರೆ ತಾಲ್ಲೂಕಿನ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಜು. 24 ರಂದು ಕೋವಿಶೀಲ್ಡ್ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾಲ್ಲೂಕಿನಲ್ಲಿ ಒಟ್ಟು 1500 ಡೋಸ್ ಕೋವಿಶೀಲ್ಡ್ ಹಾಗೂ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 250 ಕೋವ್ಯಾಕ್ಸಿನ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.
ಇದರಲ್ಲಿ ಗರ್ಭಿಣಿಯರು, ಬಾಣಂತಿಯರು, ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಲಸಿಕೆ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಲಸಿಕೆ ಸ್ಥಳದ ವಿವರ: ಆಲೂರು, ಆನಗೋಡು, ಕಕ್ಕರಗೋಳ, ಆರ್.ಜಿ.ಹಳ್ಳಿ, ನಗರದ ಆಜಾದ್‌ನಗರ, ಬಾಷಾ ನಗರ, ಭಾರತಿ ಕಾಲೋನಿ ನಗರ ಆರೋಗ್ಯ ಕೇಂದ್ರ, ತಾಯಿ ಮಕ್ಕಳ ಆಸ್ಪತ್ರೆ, ಹೆಚ್‌ಕೆಆರ್ ನಗರ ಕೇಂದ್ರ, ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರ, ಎಸ್‌ಎಂಕೆ ನಗರ ಆರೋಗ್ಯ ಕೇಂದ್ರ ಗಳಲ್ಲಿ ತಲಾ 100 ಡೋಸ್, ಅರಸಾಪುರದಲ್ಲಿ 70 ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 250 ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.