ನಟ ಪುನೀತ್ ರಾಜಕುಮಾರ್ ಅವರಿಗೆ ಶಿಂಗ್ರಿಹಳ್ಳಿ ಗ್ರಾಮದಲ್ಲಿ ನುಡಿ ನಮನ ಕಾರ್ಯಕ್ರಮ !

ಹರಪನಹಳ್ಳಿ: ಪುನೀತ್ ರಾಜಕುಮಾರ್ ಅವರು ನಮ್ಮನ್ನಗಲಿ ಹನ್ನೊಂದಕ್ಕು ಹೆಚ್ಚು ದಿನಗಳು ಕಳೆದವು, ಆದರೆ ಅವರ ಸಾವು ಅಭಿಮಾನಿಗಳಿಗೆ ಹರಗಿಸಿಕೊಳ್ಳಲು ಆಗುತ್ತಿಲ್ಲ, ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಶಿಂಗ್ರಿಹಳ್ಳಿ ಗ್ರಾಮದಲ್ಲಿ ವಿಶೇಷವಾಗಿ ಪುನೀತ್ ರಾಜಕುಮಾರ ಅವರಿಗೆ ನುಡಿ ನಮನ ಕಾರ್ಯಕ್ರಮ ಆಯೋಜನೆ ಮಾಡಿ ಪುನೀತ್ ರಾಜಕುಮಾರ್ ಅವರ ಯಶೋಗಾಥೆಯನ್ನು ಹಾಡಿದರು.
ಶ್ರೀ ರೇಣುಕಾ ಮಹಿಳಾ ಸಂಘ ಹಾಗು ಶಿಂಗ್ರಿಹಳ್ಳಿ ಗ್ರಾಮದ ಗ್ರಾಮಸ್ಥರೆಲ್ಲರು ಸೇರಿ ಅನ್ನ ಸಂತರ್ಪಣೆ ಮಾಡುವುದರ ಮೂಲಕ , ಸಂಗೀತ ರಸಮಂಜರಿಕಾರ್ಯಕ್ರಮ ಆಯೋಜನೆ ಮಾಡುವುದರ ಮೂಲಕ ಮೆಣದ ಬತ್ತಿ ಹಿಡಿದು ಪುನೀತ್ ರಾಜಕುಮಾರ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು., ಶಿಂಗ್ರಿಹಳ್ಳಿ ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬವು ಕೂಡ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಪೂರ್ಣ ಅಶ್ರುತರ್ಪಣ ಸಲ್ಲಿಸಿದರು, ಶಾಲಾ ಮಕ್ಕಳು ಯುವಕರು ವೃದ್ಧರು ಭಾಗಿಯಾಗಿ ಕಣ್ಣೀರಿಟ್ಟರು.ಪುನೀತ್ ರಾಜಕುಮಾರ ಅವರ ಗೀತೆಗಳನ್ನು ಹಾಡುತ್ತಾ ಅವರ ಸಾಧನೆಗಳನ್ನು ಜನರಿಗೆ ಸಂಗೀತಗಾರರು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಂಗ್ರಿಹಳ್ಳಿ ಗ್ರಾಮದ ಸಮಸ್ತ ಜನತೆ ಎಲ್ಲರೂ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ,ರಮೇಶ್ ಈ,ರಾಮಣ್ಣ ಈಎಂ, ಪ್ರಭು, ಪಕ್ಕೀರಾಜ್, ಧನರಾಜ್, ಪ್ರದೀಪ್, ಗ್ರಾಪಂ ಅಧ್ಯಕ್ಷರು ,ಉಪಾಧ್ಯಕ್ಷ ರು, ಸದಸ್ಯರು, ಊರಿನ ಸಮಸ್ತ ಗ್ರಾಮಸ್ಥರು ಭಾಗಿಯಾಗಿದ್ದರು.