gmit; ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆ: ಜಿಎಂಐಟಿ ವಿದ್ಯಾರ್ಥಿಗಳಿಗೆ ಬಹುಮಾನ
ದಾವಣಗೆರೆ, ನ. 10: ಬೆಂಗಳೂರಿನ ಪ್ರತಿಷ್ಠಿತ ರೇವ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ “ರೇವ ಹ್ಯಾಕ್ 2023” ಎಂಬ ರಾಷ್ಟ್ರೀಯ ಮಟ್ಟದ ಆಫ್ ಲೈನ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ಸೋಶಿಯಲ್ ಇಂಪ್ಯಾಕ್ಟ್ ವಿಭಾಗದಲ್ಲಿ ಪ್ರತಿಷ್ಠಿತ ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ (GMIT) ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಮೊದಲ ಬಹುಮಾನ ಪಡೆದಿದ್ದಾರೆ.
ವನಮಾಲಿ ಸೇದಿಂಬಿ, ಸುಷ್ಮಾ ಬಿ ಸಿ, ಶಷ್ಟಿ ಡಿ ಬಿ, ಸುಮಂತ್ ದೇಸಾಯಿ ಮತ್ತು ವಿವೇಕ್ ಆರ್ ಕೆ ಬಹುಮಾನ ವಿಜೇತರು.
lokayukta trap; ಪೋಡಿ ನಂಬರ್ ಸರಿಮಾಡಲು ಲಂಚ: ದಾವಣಗೆರೆ ಸರ್ವೇ ಸುಪರ್ ವೈಸರ್ ಲೋಕಾಯುಕ್ತ ಬಲೆಗೆ
ವಿವಿಧ ರಾಜ್ಯಗಳಿಂದ ಆಗಮಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಜಿ ಎಂ ಐ ಟಿ ಕಾಲೇಜಿನ ವಿದ್ಯಾರ್ಥಿಗಳು ಟೀಮ್ ರೆಡ್ ಎಂಬ ತಂಡದ ಮೂಲಕ ಹೆಣ್ಣು ಮಕ್ಕಳ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ತಯಾರಿಸಿದ ವಿಶಿಷ್ಟ ವಿಡಿಯೋ ಗೇಮ್ ಅನ್ನು ಪ್ರದರ್ಶಿಸುವುದರ ಮೂಲಕ ಸೋಶಿಯಲ್ ಇಂಪ್ಯಾಕ್ಟ್ ವಿಭಾಗದಲ್ಲಿ ಮೊದಲ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತಾಧಿಕಾರಿಗಳಾದ ವೈಯು ಸುಭಾಷ್ ಚಂದ್ರ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂ ಬಿ, ವಿಭಾಗದ ಮುಖ್ಯಸ್ಥರಾದ ಡಾ. ವೀರಪ್ಪ ಬಿ ಎನ್, ಕಾಲೇಜಿನ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್ ಮತ್ತು ಕಾಲೇಜಿನ ಹ್ಯಾಕಥಾನ್ ಸಂಚಾಲಕರಾದ ಮಾರುತಿ ಎಸ್ ಟಿ ಇವರು ಅಭಿನಂದಿಸಿದರು.