ಕೆ.ಯು.ಡಬ್ಲ್ಯು.ಜೆ. ಕೇಂದ್ರ ಕಛೇರಿಯಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ

IMG-20211116-WA0183

ಬೆಂಗಳೂರು: ಇಂದು ಬೆಂಗಳೂರಿನ ಕಂದಾಯ ಭವನದಲ್ಲಿರುವ ಕೆ.ಯು.ಡಬ್ಲ್ಯು.ಜೆ ಕೇಂದ್ರ ಕಛೇರಿಯಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಾರ್ತಾ ಇಲಾಖೆಯ ಆಯುಕ್ತರಾದ ಜಗದೀಶ್,ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ಗುರುಲಿಂಗಸ್ವಾಮಿ,ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶಣೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್,ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ಹಾಗೂ ರಾಜ್ಯ ಖಜಾಂಚಿಗಳಾದ ಉಮೇಶ್ವರ ಪಾಲ್ಗೊಂಡಂತ ಈ ಕಾರ್ಯಕ್ರಮದಲ್ಲಿ ಆಯುಕ್ತರಾದ ಜಗದೀಶ,ಗುರುಲಿಂಗಸ್ವಾಮಿ,ಹಾಗೂ ಸದಾಶಿವ ಶಣೈ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತರಾದ ಜಗದೀಶ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾದ ಗುರುಲಿಂಗಸ್ವಾಮಿಯವರು ಪತ್ರಕರ್ತರ ಸ್ಥಿತಿ ಗತಿಗಳ ಕುರಿತು ಹಾಗೂ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರು ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದಂತ ಪತ್ರಕರ್ತರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ದೊರಕಿಸಿ ಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು ಜೊತೆಗೆ ತಮ್ಮ ಏನೇ ಸಮಸ್ಯಗಳಿದ್ದರೂ ನೇರವಾಗಿ ಬನ್ನಿ ಪರಿಹಾರ ಒದಗಿಸಲು ಶ್ರಮಿಸುತ್ತೇವೆ ಎಂದಾಗ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ಕೆಲವೊಂದು ಪತ್ರಕರ್ತರ ಜಲ್ವಂತ ಸಮಸ್ಯಗಳಾದ ಗ್ರಾಮಾಂತರ ಪತ್ರಕರ್ತರುಗಳಿಗೆ ಉಚಿತ ಬಸ್ ಪಾಸ್,ಪ್ರತಿಯೊಬ್ಬ ಪತ್ರಕರ್ತರುಗಳಿಗೆ ಉಚಿತ ಆರೋಗ್ಯ ಸ್ಮಾರ್ಟ್ ಕಾರ್ಡ್,ವಾರ,ಪಾಕ್ಷಿಕ,ಮಾಸಿಕ ಹಾಗೂ ಇನ್ನೀತರ ಸಂಪಾದಕರು, ವರದಿಗಾರರಿಗೆ ಈಗಿರುವ ಆದೇಶದನ್ವಯ ಅವರುಗಳಿಗೆ ಮಾಶಾಸನ ಇಲ್ಲದಿರುವುದರ ಕುರಿತಂತೆ ಗಮನಕ್ಕೆ ತಂದು ಆದಷ್ಟು ಈ ಕುರಿತಂತೆ ಸರ್ಕಾರದ ಗಮನಕ್ಕೆ ತಂದು ಪತ್ರಕರ್ತರ ಸಂಕಷ್ಟಕ್ಕೆ ಸ್ಪಂಧಿಸಬೇಕೆಂದು ವಿನಂತಿಸಿದರು

ವಾರ್ತಾ ಇಲಾಖೆಯು ಇತ್ತೀಚೆಗೆ ರಾಜ್ಯದ ಪ್ರತಿ ಪತ್ರಿಕೆಯ ಮಾಲಿಕರಿಗೆ ತಮ್ಮಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರ ಸಂಪೂರ್ಣ ಮಾಹಿತಿ ಜೊತೆಗೆ ಅವರುಗಳ ಪಿ.ಎಫ್. ಇ.ಪಿ.ಎಫ್. ಬಗ್ಗೆಯೂ ವಿವರ ಒದಗಿಸುವಂತೆ ಕೇಳಿದ್ದರೂ ಇದುವರೆಗೂ ರಾಜ್ಯದಲ್ಲಿರುವ 503 ಪತ್ರಿಕೆಗಳ ಸಂಪಾದಕರು ಗಳ ಪೈಕಿ ಒಬ್ಬರೂ ಮಾಹಿತಿ ನೀಡದಿದ್ದದ್ದು ವಿಷಾದನೀಯ.ವಾರ್ತಾ ಇಲಾಖೆ ಚಾಪೆ ಕೆಳಗೆ ತೂರಿದರೆ ಪತ್ರಿಕೆಯ ಮಾಲಿಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.

ಇಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಪತ್ರಕರ್ತರ ನೈಜ ಸ್ಥಿತಿಗೆ ತಾವುಗಳ ಪರಿಹಾರ ಹುಡುಕಿ ಸಾವು ಬದುಕಿನ ಅಂಚಿನಲ್ಲಿರುವ ಪತ್ರಕರ್ತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಈ ಇಬ್ಬರು ಅಧಿಕಾರಿಗಳಿಗೆ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ಒತ್ತಾಯಿಸಿದರು ಜೊತೆಗೆ ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷರಾದಂತ ಸದಾಶಿವ ಶಣೈ ರವರಲ್ಲಿ ಮುಂಬರುವ ದಿನಮಾನಗಳಲ್ಲಿ ತಮ್ಮ ಅಕಾಡಮಿಯಿಂದ ಕೊಡ ಮಾಡುವ ಮಾಧ್ಯಮ ಅಕಾಡಮಿ ಪ್ರಶಸ್ತಿಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರುಗಳಿಗೆ ಪ್ರಾಶ್ಯಸ್ತ್ಯ ನೀಡಿ ಗೌರವಿಸಬೇಕೆಂದು ವಿಜ್ಞಾಪ್ತಿ ಮಾಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!