ಬಂಗಾರ ಪದಕ ಪಡೆದ ನೀರಜ್ ಚೋಪ್ರಾ ಟೊಕಿಯೋದಲ್ಲಿನ ಚಿತ್ರಗಳು ನಿಮಗಾಗಿ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ. ಪುರುಷರ ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ. ಚಿನ್ನ ಗೆದ್ದ ನೀರಜ್ ಗೆ ಹರಿಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಣೆ ಮಾಡಿದೆ.
ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ದೇಶದಾದ್ಯಂತ ಶುಭಾಶಯಗಳು ಮಹಾಪೂರವೇ ಹರಿದುಬರುತ್ತಿದೆ. ಚಿನ್ನದ ಪದಕವನ್ನ ನೀರಜ್ ಮಿಲ್ಕಾ ಸಿಂಗ್ ಗೆ ಸಮರ್ಪಿಸಿದ್ದಾರೆ. ಇನ್ನು ಮಹೀಂದ್ರಾ ಕಂಪನಿ ಚೋಪ್ರಾ ಗೆ 30 ಲಕ್ಷದ ಕಾರ್ ಗಿಫ್ಟ್ ನೀಡಲು ಮುಂದಾಗಿದೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೆರಿದಂತೆ ಸ್ಯಾಂಡಲವುಡ್ ನಿಂದ ಶಿವರಾಜ್ ಕುಮಾರ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ..
ಟೋಕಿಯೋದಲ್ಲಿ ನೀರಜ್ ಚೋಪ್ರಾ ಜಾವೆಲಿನ್ ಬಂಗಿಯ ಚಿತ್ರಗಳು ಹಾಗೂ ವಿಡಿಯೋ ನೋಡಿ.