ದಾವಣಗೆರೆ ಪೂರ್ವ ವಲಯದ ನೂತನ ಐಜಿಪಿ ಐಪಿಎಸ್ ಅಧಿಕಾರಿ ಡಾ.ಕೆ.ತ್ಯಾಗರಾಜನ್ ಅಧಿಕಾರ ಸ್ವೀಕಾರ

ದಾವಣಗೆರೆ: ಪೂರ್ವವಲಯದ ನೂತನ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕರಾಗಿ ಐಪಿಎಸ್ ಅಧಿಕಾರಿ ಡಾ.ಕೆ.ತ್ಯಾಗರಾಜನ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಮೊದಲು ಡಾ.ಕೆ.ತ್ಯಾಗರಾಜನ್, ಐ.ಪಿ.ಎಸ್, ಡೆಪ್ಯೂಟಿ ಇನ್ಸ್ಪೆಕ್ಟರ್ ಆಫ್ ಪೊಲೀಸ್, ನೇಮಕಾತಿ, DIG RECRUITMENT ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಪೂರ್ವ ವಲಯ (ಐಜಿಪಿ) ದಾವಣಗೆರೆ, ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಲಾಗಿತ್ತು.
ಅದಾಗ್ಯೂ ಕಳೆದ ಮೂರು ವರ್ಷಗಳಿಂದ ಪೂರ್ವವಲಯ ಐಜಿಪಿ ಕಚೇರಿಗೆ ಪ್ರಭಾರಿ ಹುದ್ದೆಯಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನ ಸರ್ಕಾರ ನೇಮಕ ಮಾಡಿದೆ. ಪೂರ್ಣ ಪ್ರಮಾಣದ ಹುದ್ದೆಗೆ ಯಾವ ಐಪಿಎಸ್ ಅಧಿಕಾರಿ ಬರುತ್ತಿಲ್ಲವೋ ಅಥವಾ ಸರ್ಕಾರ ನೇಮಕ ಮಾಡುತ್ತಿಲ್ಲವೋ ಎಂಬ ಮಾತುಗಳಿಗೆ ಇದೀಗ ತೆರೆಬಿದ್ದಿದ್ದು, ನೂತನ ಪ್ರಭಾರ ಪೊಲೀಸ್ ಮಹಾ ನಿರೀಕ್ಷಕರಾಗಿ ಐಪಿಎಸ್ ಅಧಿಕಾರಿ ಡಾ.ಕೆ.ತ್ಯಾಗರಾಜನ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಬಿ.ಬಸರಗಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      