ಸಿ ಬಿ ರಿಷ್ಯಂತ್ ದಾವಣಗೆರೆ ಎಸ್ ಪಿ ಯಾಗಿ ಅಧಿಕಾರಿ ಸ್ವೀಕಾರ : ನಾಳೆಯಿಂದ ನೂತನ ಎಸ್ ಪಿ ಯಿಂದ ಕಟ್ಟುನಿಟ್ಟಿನ ನಿಯಮ ಜಾರಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಶ್ರೀ.ಸಿ.ಬಿ.ರಿಷ್ಯಂತ್, ಐಪಿಎಸ್ ಇಂದು ಅಧಿಕಾರ ವಹಿಸಿಕೊಂಡರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ರಾಜೀವ್ ಎಂ. & ಪೊಲೀಸ್ ಉಪಾಧೀಕ್ಷಕರಾದ ಶ್ರೀ ನಾಗೇಶ್ ಐತಾಳ್, ಶ್ರೀ ಬಸವರಾಜ್ ಬಿ.ಎಸ್., ಶ್ರೀ ಸಂತೋಷ್ ಕೆ.ಎಂ., ಶ್ರೀ ನರಸಿಂಹ ವಿ.ತಾಮ್ರದ್ವಜ ಹಾಗೂ ಸಹಾಯಕ ಆಡಳಿತಾಧಿಕಾರಿ ಶ್ರೀ ನಾಗೇಶ್ ಉಪಸ್ಥಿತರಿದ್ದರು.
ಇಂದು ಮದ್ಯಾಹ್ನ ಮೈಸೂರಿನ ನೂತನ ಎಸ್ ಪಿ ಆರ್ ಚೇತನ್ ಅವರಿಗೆ ಅಧಿಕಾರಿ ವಹಿಸಿಕೊಟ್ಟು ದಾವಣಗೆರೆಗೆ ಸಂಜೆ ಆಗಮಿಸಿದ ಸಿಬಿ ರಿಷ್ಯಂತ್ ಎ ಎಸ್ ಪಿ ರಾಜೀವ್ ಅವರಿಂದ ಅಧಿಕಾರ ಸ್ವೀಕರಿಸಿದ್ರು. ಇದಕ್ಕೂ ಮುನ್ನ ಪೋಲೀಸ್ ದ್ವಜಾವಂದನೆ ಸ್ವೀಕರಿಸಿದ್ರು.
ನಿರ್ಗಮಿತ ಎಸ್ ಪಿ ಹನುಮಂತರಾಯ ಕೂಡ ದಾವಣಗೆರೆಯಿಂದ ಮದ್ಯಾಹ್ನ ಹಾವೇರಿ ಜಿಲ್ಲೆಗೆ ತೆರಳಿ ಅಲ್ಲಿ ನೂತನ ಎಸ್ ಪಿ ಯಾಗಿ ಅಧಿಕಾರಿ ಸ್ವೀಕರಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 14 ರ ನಂತರ ಕೂಡ ಲಾಕ್ ಡೌನ್ ಮುಂಧುವರಿಯಲಿದೆ ಎಂದು ಸಿ ಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ನೂತನ ಎಸ್ ಪಿ ಕೋವಿಡ್ ನಿಯಂತ್ರಣದಲ್ಲಿ ಉತ್ತಮ ಕೆಲಸ ಮಾಡುತ್ತಾರೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಈ ಹಿಂದೆ ಮೈಸೂರಿನಲ್ಲಿ ಲಾಕ್ ಡೌನ್ ಹಾಗೂ ಕೊವಿಡ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.