ನೂತನ ಎಸ್ ಪಿ ಜೊತೆ ಡಿಸಿ, ಜಿಪಂ ಸಿಇಓ, ಆಸ್ಪತ್ರೆಗಳ ಸುತ್ತಾಟ, ವೈಧ್ಯಕೀಯ ವ್ಯವಸ್ಥೆಗಳ ಪರಿಶೀಲನೆ

sp ryshyanth dc zp ceo visit Chigateri hospital

ದಾವಣಗೆರೆ: ನೂತನ ಎಸ್ಪಿ ರಿಷ್ಯಂತ್ ಅವರೊಂದಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಓ, ಜಿಲ್ಲಾ ಆರೋಗ್ಯಾಧಿಕಾರಿಗಳು ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕುರಿತು ಸೇರಿದಂತೆ ಅಲ್ಲಿನ ಸ್ಥಿತಿ ಗತಿಗಳನ್ನು ಎಸ್ಪಿ ಕೂಲಂಕುಷವಾಗಿ ಪರಾಮರ್ಶಿಸಿ ಡಿಹೆಚ್ಓ ಡಾ. ನಾಗರಾಜ್ ಮತ್ತು ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ಜಯಪ್ರಕಾಶ್ ಅವರೊಂದಿಗೆ ಚರ್ಚೆ ನಡೆಸಿದರು.ಕರೋನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಮೇಲ್ವಿಚಾರಣೆ ಮಾಡುತ್ತಿರುವವ ಅವರ ಸಂಬಂಧಿಕರು ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸುವಂತೆ ಇದೇ ವೇಳೆ ಆಸ್ಪತ್ರೆಯ ಅಧೀಕ್ಷಕರಿಗೆ ಸೂಚಿಸಿದರು.

ಆಸ್ಪತ್ರೆಯ ಎಲ್ಲಾ ವಾರ್ಡ್ ಗಳನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದ್ರ, ಆಸ್ಪತ್ರೆಯ ಹಿಂಬಾಗವಿರುವ, ತುರ್ತು ಚಿಕಿತ್ಸಾ ಕೊಠಡಿ, ಕೊವಿಡ್ ಫ್ಲೂ ಕೊಠಡಿ ವೀಕ್ಷಿಸಿ ನೇರೆದಿದ್ದ ಸಾರ್ವಜನಿಕರನ್ನ ಮಾತನಾಡಿಸಿದ್ರು. ಇದೇ ವೇಳೆ ಆಕ್ಸಿಜನ್ ಸರಬರಾಜಾಗುವ ಕೊಠಡಿಗೆ ತೆರಳಿ ಎಷ್ಟು ಜಂಬೋ ಸಿಲಿಂಡರ್ ಇವೆ, ಯಾವೆಲ್ಲಾ ರೀತಿ ಕೆಲಸ ನಡೆಯುತ್ತಿದೆ ಎಂದು ಎಸ್ ಪಿ ರಿಷ್ಯಂತ್ ಗೆ ವಿವಿರಿಸಿದ್ರು. ನಂತರ ಮೂಖ್ಯ ದ್ವಾರದ ಬಳಿ ಇರುವ ಆಕ್ಸಿಜನ್ ಶೇಖರಣಾ ಬಳಿ ತೆರಳಿ ಎಷ್ಟು ಖಾಲಿ ಇದೆ, ಹಾಗೂ ಯಾವೆಲ್ಲ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪರಿಶೀಲಿಸಿ ವೈಧ್ಯರಿಗೆ ಸಲಹೆ ನೀಡಿದ್ರು.

ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ವಹಿಸುವಂತೆ ಎಸ್ಪಿ ಮತ್ತು‌ ಡಿಸಿ ಅಸ್ಫತ್ರೆಯ ವೈಧ್ಯರಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಜಿಪಂ ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್, ಡಿ ಹೆಚ್ ಓ ಡಾ,ನಾಗರಾಜ್, ಡಾ,ಶಶಿಧರ್, ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈಧ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!