ದಾವಣಗೆರೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ!
ದಾವಣಗೆರೆ : ಜಗಳೂರು ತಾಲೂಕಿನ ಗೋಪಗೊಂಡನಹಳ್ಳಿ ಗ್ರಾಮದಲ್ಲಿ 5 ದಿನದ ನವಜಾತ ಶಿಶುವೊಂದು ಪತ್ತೆಯಾಗಿದೆ. ಜೂನ್ 3ರಂದು ತಾಲ್ಲೂಕಿನ ಗೋಪಗೊಂಡನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಚೌಡಮ್ಮ ಮಾತಂಗಮ್ಮ ದೇವಸ್ಥಾನದ ಒಳಗಡೆ ಸುಮಾರು 5 ದಿನದ ನವಜಾತ ಹೆಣ್ಣು ಶಿಶುವನ್ನು ಯಾರೋ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಮಗುವನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಈ ಶಿಶುವಿನ ಆರೋಗ್ಯ ಪ್ರಸ್ತುತ ಉತ್ತಮವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಿಶುವಿನ ಜೈವಿಕ ಪೋಷಕರು ಶಿಶುವನ್ನು ಪಡೆಯಲು ಶಿಶುವಿನ ಜನನಕ್ಕೆ ಸಂಬ0ಧಿಸಿದ ಸೂಕ್ತವಾದ ದಾಖಲಾತಿಗಳೊಂದಿಗೆ ಪ್ರಕಟಣೆಗೊಂಡ 60 ದಿನಗಳ ಒಳಗಾಗಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜೆ.ಹೆಚ್ ಪಟೇಲ್ ಬಡಾವಣೆ ಶಾಮನೂರು. ದೂ.ಸಂ-9591430013/8722358929 ಅಥವಾ ಸರ್ಕಾರಿ ವಿಶೇಷ ದತ್ತು ಸಂಸ್ಥೆ (ಅಮೂಲ್ಯ) (ಜಿ) ಲೋಕಿಕೆರೆ ರಸ್ತೆ, ಶ್ರೀರಾಮನಗರ, ದೂ.ಸಂ-7829215214 ದಾವಣಗೆರೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
garudavoice21@gmail.com 9740365719