ಮುಂದಿನ 2 ವರ್ಷ ಬಿ ಎಸ್ ವೈ ಸಿಎಂ: ಯಾರದ್ದೋ ಪ್ರಶ್ನೆಗೆ ಉತ್ತರ ನೀಡೋದು, ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡೋದು ನಮ್ಮ ರಾಜಕಾರಣವಲ್ಲ – ಮುರುಗೇಶ್ ನಿರಾಣಿ
ದಾವಣಗೆರೆ: ಸಿಎಂ ಬಿಎಸ್ ಯಡಿಯೂರಪ್ಪ ಸಬಲವಾದ ಮುಖ್ಯಮಂತ್ರಿಯಾಗಿದ್ದು, ಕರೊನಾ ಸಂದರ್ಭದಲ್ಲಿ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಹಾಗಾಗಿ, ಅವರೇ ಸಿಎಂ ಅಗಿ ಮುಂದುವರೆಯಬೇಕು ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಸಿಎಂ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಳ್ಳೋರು ಕೇಂದ್ರ ವರಿಷ್ಠರು ಹೊರತು ರಾಜ್ಯ ನಾಯಕರಲ್ಲ. ಇನ್ನೂ 2 ವರ್ಷ ಸಮರ್ಥವಾಗಿ ಆಡಳಿತ ಮಾಡ್ತಾರೆ ಬಿಎಸ್ ವೈ ಆಡಳಿತ ನಿರ್ವಹಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಆಗುವರು ಎಂಬ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬೇರೆಯವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕೆಲಸವೇ ಸಾಕಷ್ಟಿದೆ. 33 ಮೈನ್ಸ್ಗಳ ಹರಾಜು ಪ್ರಕ್ರಿಯೆ ಚಾಲನೆಗೊಂಡಿದೆ. ಇಲಾಖೆಯಲ್ಲಿ ಹಲವಾರು ಬದಲಾವಣೆ ತರುತ್ತಿದ್ದೇವೆ ಎಂದು ಪ್ರಶ್ನೆ ತಳ್ಳಿಹಾಕಿದರು.
ಯಾರದ್ದೋ ಪ್ರಶ್ನೆಗೆ ಉತ್ತರ ನೀಡೋದು, ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡೋದು ನಮ್ಮ ರಾಜಕಾರಣವಲ್ಲ. ಇಂತಹದ್ದಕ್ಕಾಗಿಯೇ ಕೆಲವರು ಸೀಮಿತರಿದ್ದಾರೆ.ಅವರು ಉತ್ತರ ನೀಡುತ್ತಾರೆ ಎಂದು ಪರೋಕ್ಷವಾಗಿ ಕುಟುಕಿದರು.