Rain Protest: ರಾತ್ರಿ ಹಸ್ತ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ: ಮುಖ್ಯರಸ್ತೆ ಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ

IMG_20211002_133123

ದಾವಣಗೆರೆ: ನಿನ್ನೆ ರಾತ್ರಿ ಹಸ್ತ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ.

ನಿನ್ನೆ ರಾತ್ರಿ ಹಸ್ತ ಮಳೆಯ ರುದ್ರನರ್ತನಕ್ಕೆ ನಗರಾದ್ಯಂತ ನೀರಿನ ಹೊಳೆ ಹರಿದಿದ್ದು.ನಗರದ ತಗ್ಗು ಪ್ರದೇಶದ ಜನಜೀವನ ದುಸ್ತರವಾಗಿದೆ.

ನಗರದ 5ನೇ ವಾರ್ಡ ಬೂದಾಳ್ ರಸ್ತೆಯ ಬಾಪೂಜಿನಗರ ಜಗಜೀವನರಾಮ್ ನಗರದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ರಾತ್ರಿಯಲ್ಲ ನೀರನ್ನು ಹೊರ ಹಾಕುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಕಳೆದ 15 ವರ್ಷಗಳಿಂದ ಇದೇ ಸಮಸ್ಯೆ ಇದ್ದು ದೊಡ್ಡ ಮಳೆಯಾದರೆ ಮನೆಗಳಿಗೆ ನೀರು ನುಗ್ಗುತ್ತಿದ್ದು ಹಲವು ಬಾರಿ ಜಿಲ್ಲಾಡಳಿತಕ್ಕೂ ಹಾಗೂ ನಗರಪಾಲಿಕೆಗೆ ಮನವಿ ಮಾಡಿದರು ಶಾಶ್ವತ ಪರಿಹಾರ ಆಗಿಲ್ಲ ಎಂದು ಇಂದು ಬೂದಾಳ್ ಮುಖ್ಯರಸ್ತೆ ಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿ ಸ್ಥಳಕ್ಕೆ ನಗರ ಪಾಲಿಕೆ ಆಯುಕ್ತರು ಸ್ಮಾರ್ಟ್ ಸಿಟಿ ಮುಖ್ಯಸ್ಥರು ಆಗಮಿಸಬೇಕೆಂದು ಪಟ್ಟುಹಿಡಿದರು.

ನಂತರ ಸ್ಥಳಕ್ಕೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹಾಗೂ ನಗರಪಾಲಿಕೆಯ ಅಧಿಕಾರಿಗಳು ಕಾಮಗಾರಿಯನ್ನು ಅತಿಶೀಘ್ರದಲ್ಲಿ ಮುಗಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ವಿ ಎಸ್ ನರಸಿಂಹಮೂರ್ತಿ, ಹರೀಶ್ ಆಕಾಶ್ ಮಲ್ಲಿಕ್ ತಿಪ್ಪೇಶ್ ಶಿವು ಕುಮಾರ್ ಬಾಬು ಜಗಜೀವನ್ ನಗರದ ನಾಗರಿಕರ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!