ನಿಖಿಲ್ ಹಾಗೂ ರೇವತಿ ದಂಪತಿಗೆ ಗಂಡು ಮಗು ಜನನ: ಸಂತಸ ಹಂಚಿಕೊಂಡ ಮಾಜಿ ಸಿಎಂ ಹೆಚ್ ಡಿ ಕೆ

ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಅವರಿಗೆ ಇಂದು ಗಂಡು ಮಗು ಜನನವಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
2020 ರ ಏಪ್ರಿಲ್ 17 ರಂದು ವಿವಾಹವಾಗಿದ್ದ ನಿಖಿಲ್, ರೇವತಿ ಇತ್ತೀಚೆಗಷ್ಟೆ ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡಿದ್ದರು. ಈಗವರಿಗೆ ಗಂಡು ಮಗು ಹುಟ್ಟಿದ್ದು, ತಮ್ಮ ಜೀವನದಲ್ಲಿ ಇನ್ನೊಂದು ಶುಭಗಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಮೊಮ್ಮಗನ ಆಗಮನದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಂತಸ ಹಂಚಿಕೊಂಡಿದ್ದಾರೆ.