ಯಾವುದೇ ಒಂದು ಜಾತಿಯಿಂದ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಯು ಗೆಲ್ಲಲು ಸಾಧ್ಯವಿಲ್ಲ –

ದಾವಣಗೆರೆ: ಯಾವುದೇ ಒಂದು ಜಾತಿಯಿಂದ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಯು ಗೆಲ್ಲಲು ಸಾಧ್ಯವಿಲ್ಲ. ಅಭ್ಯರ್ಥಿಯು ತನ್ನ ಸಮಾಜದ ಮತಗಳ ಜೊತೆ ಬೇರೆ ಜನಾಂಗಗಳ ವಿಶ್ವಾಸದೊಂದಿಗೆ, ಆಯಾ ಪಕ್ಷಗಳ ಸಿದ್ದಾಂತದ ಮೇಲೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಕೇವಲ ನಮ್ಮ ಸಮಾಜದ ಮತ ಪಡೆದು ನಾವು ಯಾರು ಜನಪ್ರತಿನಿಧಿಗಳಾಗಲು ಸಾಧ್ಯವಿಲ್ಲ. ಎಂದು ಉಪ್ಪಾರ ಸ್ವಾಮೀಜಿ ಹೇಳಿದರು.
ಸಾಮಾಜಿಕ ಜೀವನದಲ್ಲಿ ತಾವುಗಳೆಲ್ಲರೂ ಇತರೆ ಸಮಾಜಗಳ ಜನರೊಂದಿಗೆ ಬೆರೆತು ಪರಸ್ಪರ ವಿಶ್ವಾಸ, ಸಹಕಾರ, ಸಹಬಾಳ್ವೆಯೊಂದಿಗೆ ಬೆರೆತಾಗ ಮಾತ್ರ ನಾವು ಯಾವುದೇ ಸಾಧನೆಯನ್ನು ಬೇಕಾದರೂ ಮಾಡಬಹುದು. ಸಮಾಜದ ಜನರು ಒಗ್ಗಟ್ಟಾಗಿ, ಸಮಾಜದಲ್ಲಿ ಯಾರಿಗೆ ಆಗಲಿ ಉನ್ನತ ಸ್ಥಾನಕ್ಕೆ ಹೋಗಲು ಅವಕಾಶ ಸಿಕ್ಕಾಗ ಬೆಂಬಲಿಸಿ, ಸಹಕಾರ ನೀಡಿ ಎಂದು ಈ ವೇಳೆಯಲ್ಲಿ ಹೇಳಿದರು. ಅಲ್ಲದೆ ಸಮಾಜದಲ್ಲಿ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಹಕರಿಸಿ, ಉನ್ನತ ಸ್ಥಾನಕ್ಕೆ ಬೆಳೆಯಲು ಪ್ರೇರೇಪಿಸಿ, ಸಣ್ಣ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ, ವ್ಯವಹಾರಗಳನ್ನು ಮಾಡಿ, ಆರ್ಥಿಕವಾಗಿ ಮುನ್ನಡೆಯಿರಿ. ಆರ್ಥಿಕ ಸಬಲತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು. ಸಮಾಜದ ಜನರು ಎಚ್ಚೆತ್ತುಕೊಳ್ಳಲು ಅನುಕೂಲವಾಗುವಂತೆ ಜೀವನದಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಬೇಕು.
ಕೊನೆಯಲ್ಲಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ ಪದ್ಯವನ್ನು ಸ್ವಲ್ಪ ಬದಲಾವಣೆಯೊಂದಿಗೆ ಸಮಾಜಕ್ಕೆ ಸಮಾಜದ ಜನರು ಅರಿತುಕೊಳ್ಳಲು ಬಾರಿಸು ಭಗಿರಥ ಉಪ್ಪಾರ ಡಿಂಡಿಮವ, ಓ ಉಪ್ಪಾರ ಹೃದಯ ಶಿವ, ಸತ್ತಂತಿಹ ಉಪ್ಪಾರರನ್ನು ಬಡಿದೆಚ್ಚರಿಸು, ಕಚ್ಚಾಡುವ ಉಪಾರರ ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚನ ಉಪ್ಪಾರರಿಗೆ ಕಣ್ಣೀರು ಸುರಿಸು, ಒಟ್ಟಿಗೆ ಬಾಳುವ ತೆರದಲ್ಲಿ ಅರಸು, ಓ ಭಗೀರಥ, ಉಪ್ಪಾರ ಹೃದಯ ಶಿವ ಎಂದು ಉಪ್ಪಾರರ ಆರಾಧ್ಯ ದೈವ ಭಗೀರಥನ ಮೇಲೆ ಕವಿತೆಯ ಮೂಲಕ ಹೇಳುತ್ತಾ ಉಪ್ಪಾರರಿಗೆ ಒಗ್ಗಟ್ಟಾಗಲು ಕರೆ ನೀಡಿದರು

 
                         
                       
                       
                       
                       
                       
                       
                      