ದಾವಣಗೆರೆಯಲ್ಲಿ ಕೊವಿಡ್ ಲಸಿಕೆ ಕೊರತೆ, ಇಂದಿನಿಂದ ಲಸಿಕೆ ಇಲ್ಲ: ಡಿ ಸಿ ಮಹಾಂತೇಶ್ ಬೀಳಗಿ
ದಾವಣಗೆರೆ:ಕೋವಿಡ್ ಲಸಿಕೆ ಕೊರತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೇ.1ರಿಂದ ಲಸಿಕೆ ಲಭ್ಯವಾಗುವವರೆಗೆ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಇರುವುದಿಲ್ಲ, ಲಸಿಕೆ ಲಭ್ಯವಿರುವ ಕಡೆ ಲಸಿಕಾಕರಣ ನಡೆಯಲಿದೆ,ಹೊನ್ನಾಳಿ ಮತ್ತು ಜಗಳೂರು ತಾಲೂಕಿನಲ್ಲಿ ಅಲ್ಪ ಪ್ರಮಾಣದ ಲಸಿಕೆ ಲಭ್ಯವಿದ್ದು ಲಸಿಕೆ ಮುಗಿಯುವವರೆಗೆ ಲಸಿಕೆ ನೀಡಲಾಗುವುದು.
ಲಸಿಕೆ ಪೂರೈಕೆಯಾದ ನಂತರ ನಗರ ಪ್ರದೇಶದ 45 ವರ್ಷ ಮೇಲ್ಪಟ್ಟವರು ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡವರು ಗುರುತಿನ ಪತ್ರ ಹಾಗೂ ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿಕೊಂಡ ಮೊಬೈಲ್ ಸ್ಕ್ರೀನ್ ಶಾಟ್ ಫೋಟೋ ತರುವುದು.ಲಸಿಕೆ ಪಡೆಯಲು ಆಗಮಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.