No Water: ಹರಿಹರದಲ್ಲಿ ಸೆಪ್ಟೆಂಬರ್ 24 & 25 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ ಕೆಯುಐಡಿಎಫ್ಸಿ-ಕೆಐಯುಡಬ್ಲ್ಯೂ ಎಂಐಪಿ-ಪಿ.ಐ.ಯು ಜಲಸಿರಿ ಯೋಜನೆಯಡಿ ಕೈಗೊಂಡಿರುವ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯ (24*7), ನೀರು ಶುದ್ದೀಕರಣ ಘಟಕದ ಹತ್ತಿರ ಫ್ಲೋ ಕಂಟ್ರೋಲ್ ವಾಲ್ವ್ ಅಥವಾ ಮೀಟರ್ ಅಳವಡಿಸಬೇಕಾಗಿರುವುದರಿಂದ ಸೆ.24 ಮತ್ತು 25 ರಂದು ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹರಿಹರ ನಗರದಲ್ಲಿ ಹೊಸದಾಗಿ ಅಳವಡಿಸಿರುವ ಪೈಪ್ಲೈನ್ನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಹಾಗೂ ಹಳೇಯ ಪೈಪ್ಲೈನ್ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಆದ್ದರಿಂದ ಹೊಸದಾಗಿ ಪೈಪ್ಲೈನ್ ಅಳವಡಿಸಿರುವ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವಾಗುತ್ತಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.