Nose: ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ತುಂಡರಿಸಿದ ಪತಿರಾಯ.! ಚನ್ನಗಿರಿ ಠಾಣೆಯಲ್ಲಿ ಪತಿ ವಿರುದ್ಧ ಪ್ರಕರಣ ದಾಖಲಿಸಿದ ಪತ್ನಿ

ದಾವಣಗೆರೆ: (Nose) ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಸಾಲದ ಕಂತು ಕಟ್ಟುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿರುವ ದಂಪತಿಗಳ ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿ ವಿದ್ಯಾಗೆ ನಿಂದಿಸಿ, ಪತಿ ವಿಜಯ್ಹ ಲ್ಲೆ ಮಾಡಿದ್ದಾನೆ. ಗಲಾಟೆ ವೇಳೆ ಕೆಳಗೆ ಬಿದ್ದ ಪತ್ನಿ ವಿದ್ಯಾಳ ಮೂಗನ್ನು ಕಚ್ಚಿ ಪತಿ ವಿಜಯ್ ತುಂಡರಿಸಿದ್ದಾನೆ. ತಕ್ಷಣವೇ ಗಲಾಟೆ ಬಿಡಿಸಿ, ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ಸ್ಥಳೀಯರು ಕಳುಹಿಸಿದ್ದಾರೆ.
ಪತ್ನಿ ವಿದ್ಯಾ(30) ರ ಮೂಗಿನ ಮುಂಭಾಗ ಸಂಪೂರ್ಣ ಕಟ್ ಆಗಿದ್ದು, ಗಾಯಗೊಂಡಿದ್ದ ವಿದ್ಯಾಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ನಂತರ ಪತಿ ವಿರುದ್ದ
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೋಲೀಸ್ ಠಾಣೆಯಲ್ಲಿ ಕೇಸ್ ನಂಬರ್ 415/2025 ರಂತೆ ಕಲಂ 115(2), 117(2), 351(2), 352 BNS ರಡಿ ಪ್ರಕರಣ ದಾಖಲಿಸಲಾಗಿದೆ
ದೂರಿನ ಸಾರಾಂಶ:
ದಿನಾಂಕ:10.07.2025 ರಂದು ಮದ್ಯಾಹ್ನ 02.30 ಪಿ.ಎಂ ಗಂಟೆಗೆ ಪಿರ್ಯಾದಿಯವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿಯವರು ಧರ್ಮಸ್ಥಳ ಸಂಘದಲ್ಲಿ 2024 ರಲ್ಲಿ 2,00,000/- (ಎರಡು ಲಕ್ಷ) ರೂಪಾಯಿಗಳನ್ನು ನನ್ನ ಮತ್ತು ನನ್ನ ಗಂಡ ಇಬ್ಬರು ಸೇರಿ ಸಾಲವಾಗಿ ಪಡೆದುಕೊಂಡಿರುತ್ತೇನೆ. ಈ ಸಾಲವನ್ನು ತೆಗೆದುಕೊಳ್ಳಲು ನನ್ನ ಗಂಡನ ಒಪ್ಪಿಗೆ ಸಹ ಇರುತ್ತದೆ. ಪ್ರತಿ ವಾರ ನಾನು ಹಣವನ್ನು ಸಂಘಕ್ಕೆ ಕಟ್ಟಿಕೊಂಡು ಹೋಗುತ್ತಿದ್ದೇ ಕೊನೆಯ ತಿಂಗಳ ಎರಡು ವಾರ ನನ್ನ ಹತ್ತಿರ ಹಣವಿಲದ ಕಾರಣ ಕಟ್ಟಲು ಸಾಧ್ಯವಾಗಲಿಲ್ಲ, ಆದ ಕಾರಣ ಧರ್ಮಸ್ಮಳ ಸಂಘದವರು ನನ್ನ ಗಂಡನಿಗೆ ಪೋನ್ ಕರೆ ಮಾಡಿ ಮಾತಾನಾಡಿದರು
ಆಗ ನನ್ನ ಗಂಡ ವಿಜಯ್ ಬಿನ್ ಕರಿಯಪ್ಪ ಆದ ಇವರು ದಿನಾಂಕ:
-08/07/2025 ರಂದು 12:30 ಗಂಟೆ ಸಮಯದಲ್ಲಿ, ನಮ್ಮ ಮನೆಯಲ್ಲಿ ಏಕಾಏಕಿ ನನ್ನ ಕುತ್ತಿಗೆಯನ್ನು ಹಿಡಿದುಕೊಂಡು ಏಕೆ ಹಣವನ್ನು ಕಟ್ಟಲ ಎಂದು ನನ್ನನ್ನು ಹಿಡಿದುಕೊಂಡು ಕಾಲಿನಿಂದ ಹೊಡೆದು ನೆಲಕ್ಕೆ ಕೆಡವಿ ನನ್ನ ಕುತ್ತಿಯ ಮೇಲೆ ಕಾಲನ್ನು ಇಟ್ಟು ತುಳುಯುತ್ತಾ, ಹೊಟ್ಟೆಯ ಭಾಗಕ್ಕೆ, ಕಾಲಿನಿಂದ ಬಲವಾಗಿ ಹೊಡೆದು ನಿನ್ನ ಬಿಡುವುದಿಲ್ಲ ನೀನು ಏನೂ ಮಾಡಿತ್ತಿಯೋ ಗೊತ್ತಿಲ್ಲ ಹಣವನ್ನು ಎಲ್ಲಾದರೂ ತಂದು ಕಟ್ಟು ಇಲವಾದರೇ ನಿನನ್ನು ಸಾಯಿಸುತ್ತೇನೆ ಎಂದು ನನ್ನ ಮೂಗಿಗೆ ಬಾಯಿ ಹಾಕಿ ನನ್ನ ಮೂಗನ್ನು ಹಲ್ಲಿನಿಂದ ಕಡೆದು ಪೂರ್ತಿ ಮೂಗನ್ನು ಕತ್ತರಿಸಿದನ್ನು ಇಷ್ಟೇ ಅಲ್ಲದೆ ನಿನ್ನ ಸಾಯಿಸುವವರೆಗೂ ಬಿಡುವುದಿಲ್ಲ ಎಂದು ನನ್ನನ್ನು ಓಡಿಸಿಕೊಂಡು ಬಂದನ್ನು ಆಗ ಅಲೆ ಇದ್ದ ಮಣಿಕಂಠ ಬಿನ್ ಅಂಜಿನಪ್ಪ ಮತ್ತು ಶಿಲಾ ಕೋಂ ಅಂಜಿನಪ್ಪ, ಇವರುಗಳು ಅವನಿಂದ ತಪ್ಪಿಸಿ ನೀನು ಆಸ್ಪತ್ರೆಗೆ ಹೋಗು ಎಂದು ಕಳುಹಿಸಿಕೊಟ್ಟರು ಆಗ ನಾನು ತಪ್ಪಿಸಿಕೊಂಡು ಓಡಿಬಂದು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದನ್ನು ಅಲ್ಲಿನ ವೈದ್ಯರು ಇಲಿ ಮೂಗನ್ನು ಸರ್ಜರಿ ಮಾಡಲು ಆಗುವುದಿಲ್ಲ. ನೀವು ಸರ್ಜಿ ಆಸ್ಪತ್ರೆಗೆ ಕಳುಹಿಸಿದರು ನಾನು ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದನ್ನು ಮೂಗಿನ ಸರ್ಜರಿ ಮಾಡಿಸಲು ತುಂಬಾ ಹಣ ಬೇಕಾಗುತ್ತದೆ ಎಂದು ತಿಳಿಸಿದರು, ಈ ಹಿಂದೆಯೂ ಸಹ ನನ್ನ ಗಂಡ ನನ್ನ ಮೇಲೆ ಹಲೆ ಮಾಡಿರುತ್ತಾನೆ. ಈ ರೀತಿಯಾಗಿ ಪದೇ ಪದೇ ನಡೆಯುತ್ತಿದೆ, ತಾವುಗಳು ನನ್ನ ಗಂಡನ ಮೇಲೆ
ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಈಮೂಲಕ ತಮ್ಮಲಿ ವಿನಂತಿಸಿಕೊಳ್ಳುತ್ತೇನೆ, ಅಂತಾ ದೂರು ನೀಡಿರುತ್ತೆನೆ.