ನ.26 ರಂದು ‘ಗೋರಿ’ ಸಿನಿಮಾ ರಾಜ್ಯಾದ್ಯಂತ ತೆರೆಗೆ

ದಾವಣಗೆರೆ: ಹೊಸಬರೇ ಹೆಚ್ಚಾಗಿ ನಟಿಸಿರುವ ಸ್ನೇಹ-ಪ್ರೀತಿಗಿಂತ ಮಾನವೀಯತೆ ದೊಡ್ಡದು ಎಂಬ ಎಳೆಯ ಸುತ್ತ ಹೆಣೆದಿರುವ ‘ಗೋರಿ’ ಚಲನಚಿತ್ರ ನ.26ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಚಿತ್ರದ ನಿರ್ದೇಶಕ ಗೋಪಾಲಕೃಷ್ಣ ಹೊಮ್ಮರಡಿ ಹೇಳಿದರು.
ಹಾವೇರಿ ಟಾಕೀಸ್ ಬ್ಯಾನರ್‌ನಲ್ಲಿ ನಾಯಕ ನಟರಾಗಿ ಹಾವೇರಿಯ ಕಿರಣ್ ಹಾವೇರಿ, ನಟಿಯಾಗಿ ಹಾವೇರಿಯ ಸ್ಮಿತಾ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲವೂ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ವಿನು ಮನಸು ಸಂಗೀತ ನಿರ್ದೇಶನಕ್ಕೆ ಪ್ರೇಮಕವಿ ಕೆ. ಕಲ್ಯಾಣ್, ಶಿವು ಬೇರ್ಗಿ, ಎಂ.ಹೆಚ್. ಜಗ್ಗೀನ್ ಸಾಹಿತ್ಯ ಬರೆದಿದ್ದಾರೆ. ಪರಮೇಶಪ್ಪ ಪೂಜಾರ್, ಹನುಮಂತಪ್ಪ ಜಗ್ಗೀನ್, ಸೋಮಣ್ಣ ಜಗ್ಗೀನ್, ಪ್ರಕಾಶ್ ಜವಳಿ ಇನ್ನಿತರರು ಚಿತ್ರಕ್ಕೆ ಬಹಳಷ್ಟು ಸಹಕಾರ ನೀಡಿದ್ದಾರೆ.
ಗೋಷ್ಠಿಯಲ್ಲಿ ಚಿತ್ರದ ನಾಯಕ ನಟ ಕಿರಣ್ ಹಾವೇರಿ, ಹನುಮಂತಪ್ಪ ಜಗ್ಗೀನ್, ಬಾತಿ ಶಂಕರ್, ಜೀತೇಂದ್ರ ಸವಣೂರು, ಸೋಮಣ್ಣ ಜಗ್ಗೀನ್ ಮತ್ತಿತರರಿದ್ದರು