ಜನಾರ್ಧನ ರೆಡ್ಡಿ ಪಕ್ಷದ ಚಿಹ್ನೆಯಾಗಿ ಫುಟ್‌ಬಾಲ್ ಗುಂಡಿ ಸರ್ಕಲ್‌ನ ಪುಟ್‌ಬಾಲ್ ಪ್ರತಿಕೃತಿ ಮುಚ್ಚಿದ ಅಧಿಕಾರಿಗಳು

ದಾವಣಗೆರೆ: ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಚಿಹ್ನೆಯಾಗಿ ಫುಟ್‌ಬಾಲ್ ದೊರೆತಿರುವ ಹಿನ್ನೆಲೆಯಲ್ಲಿ ನಗರದ ಗುಂಡಿ ವೃತ್ತದಲ್ಲಿ ಇದ್ದ ಫುಟ್‌ಬಾಲ್‌ನ ಪ್ರತಿಕೃತಿಯನ್ನು ಅಧಿಕಾರಿಗಳು ಸೋಮವಾರ ಮುಚ್ಚಿದ್ದಾರೆ.
‘ಫುಟ್‌ಬಾಲ್’ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಚಿಹ್ನೆಯಾದ ಕಾರಣ ಗುಂಡಿ ವೃತ್ತದಲ್ಲಿ ಇದ್ದ ಫುಟ್‌ಬಾಲ್‌ನ ಪ್ರತಿಕೃತಿ ಮತದಾರರನ್ನು ಸೆಳೆಯುವ ಸಾಧ್ಯತೆ ಇದೆ. ಕೂಡಲೇ ಅದನ್ನು ಮರೆಮಾಚಬೇಕು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿಕೆಯಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.