86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಫ್ ಲೈನ್ ನೋಂದಣಿ ಪ್ರಾರಂಭ

Offline registration for 86th All India Kannada Sahitya Sammelna begins

ದಾವಣಗೆರೆ: ಹಾವೇರಿಯಲ್ಲಿ ೨೦೨೩ ರ ಜನವರಿ ೬, ೭ ಮತ್ತು ೮ ರಂದು ನಡೆಯುವ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿಚ್ಛಿಸುವ ಆಜೀವ ಸದಸ್ಯರು, ನೌಕರರು , ಕನ್ನಡಾಭಿಮಾನಿಗಳಿಗೆ ಇದುವರೆಗೂ ಆನ್ಲೈನ್ ನಲ್ಲಿ ಮಾತ್ರ ನೋಂದಣಿ ಗೆ ಅವಕಾಶ ಕಲ್ಪಿಸಲಾಗಿತ್ತು.
ಈಗ ಆಫ್ ಲೈನ್ ನಲ್ಲೂ ನೋಂದಣಿ ಮಾಡಿಸಿಕೊಳ್ಳಲು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ಕಲ್ಪಿಸಿದ್ದು, ಸಮ್ಮೇಳನಕ್ಕೆ ಪ್ರತಿನಿಧಿ ಗಳಾಗಿ ನೋಂದಣಿ ಮಾಡಿಸಿಕೊಳ್ಳಲು ಬಯಸುವವರು ಕುವೆಂಪು ಕನ್ನಡ ಭವನದಲ್ಲಿ ೫೦೦ / ರೂಪಾಯಿಗಳನ್ನು ಪಾವತಿಸಿ ರಸೀದಿ ಪಡೆದು ನೋಂದಾಯಿಸಿಕೊಳ್ಳಬಹುದು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಸೂಚನೆ:
* ನೋಂದಣಿ ಮಾಡಿಸಿಕೊಳ್ಳುವವರು ಪರಿಷತ್ತಿನ ಸದಸ್ಯತ್ವ ಪಡೆದುಕೊಂಡಿರಬೇಕು.
* ನೋಂದಾಯಿಸಿಕೊಳ್ಳುವಾಗ ಸದಸ್ಯತ್ವ ಸಂಖ್ಯೆಯನ್ನು ನಮೂದಿಸಬೇಕು.
* ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಬಯಸುವವರು ಸ್ಥಳದಲ್ಲೇ ನಾಲ್ಕುನೂರು(೪೦೦) ರೂಗಳನ್ನು ಪಾವತಿಸಿ ಆನ್ಲೈನ್ ನಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದು
*ಸಮ್ಮೇಳನದ ಪ್ರತಿನಿಧಿ ಶುಲ್ಕ ೫೦೦/-.ರೂಪಾಯಿಗಳನ್ನು ಪಾವತಿಸಿ ರಸೀದಿ ಪಡೆದುಕೊಳ್ಳ ಬೇಕು.
ಹಾಗೂ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

# ಬಿ ವಾಮದೇವಪ್ಪ. ಅಧ್ಯಕ್ಷರು,
ಜಿಲ್ಲಾ ಕಸಾ ಪ ದಾವಣಗೆರೆ -೯೪೪೮೮ ೧೨೭೦೪
# ಬಿ ದಿಳ್ಯಪ್ಪ, ಗೌರವ ಕಾರ್ಯದರ್ಶಿಗಳು-೯೪೪೯೨
೪೬೧೯೫
# ರೇವಣಸಿದ್ಧಪ್ಪ ಅಂಗಡಿ ಗೌರವ ಕಾರ್ಯದರ್ಶಿಗಳು-
೯೮೪೪೦ ೬೮೪೫೮
# ಕೆ ರಾಘವೇಂದ್ರ ನಾಯರಿ ಗೌರವಕೋಶಾಧ್ಯಕ್ಷರು
೯೮೪೪೩ ೧೪೫೪೩
# ಸಿ ಜಿ ಜಗದೀಶ್ ಕೂಲಂಬಿ
ಸಂಘಟನಾ ಕಾರ್ಯದರ್ಶಿಗಳು
೯೪೪೯೩ ೨೦೭೦೩
# ಜಿಗಳಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿಗಳು
೯೪೪೮೧ ೫೫೨೨೮
# ಈ ಎಂ ಮಂಜುನಾಥ್ ಸಹ ಕಾರ್ಯದರ್ಶಿ – ೯೪೪೮೨ ೭೭೭೭೨
# ವೀರೇಶ್ ಪ್ರಸಾದ್ ಸಹ ಕಾರ್ಯದರ್ಶಿ.
೯೯೮೬೨ ೩೨೪೮೩

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!