Old pb road: ಯಾರ ಬಲಿಗಾಗಿ ಕಾದಿದೆ ಈ ರಸ್ತೆ.? ಸಂಬಂಧಿಸಿದ ಇಲಾಖೆ ವಿರುದ್ದ ನೆಟ್ಟಿಗರ ಆಕ್ರೋಶ.!

IMG-20210924-WA0001

 

ದಾವಣಗೆರೆ: ದಾವಣಗೆರೆ – ಹರಿಹರ ಮಾಗ೯ದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬಾತಿ ಕೆರೆಯ ಹತ್ತಿರವಿರುವ ನಂದಿನಿ ಹಾಲಿನ ಡೈರಿ ಪಕ್ಕದಲ್ಲಿ ಕಿರಿದಾದ ಕಾಲುವೆ ಹಾದು ಹೇೂಗಿದ್ದು ಅದಕ್ಕೆ ಅಡ್ಡಲಾಗಿ ಕಟ್ಟಿರುವ ತಡೆಗೇೂಡೆಯು ರಸ್ತೆ ಅಗಲೀಕರಣದಿಂದಾಗಿ ರಸ್ತೆಯ ಮಧ್ಯಭಾಗವಾಗಿದೆ.ಇದಕ್ಕೆ ಯಾವುದೇ ಪ್ರತಿಫಲಕಗಳಿಲ್ಲದ ಕಾರಣ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಕಾಣದಾಗಿ ಜೀವ ಕೈಲಿಟ್ಟುಕೊಂಡು ಸಂಚರಿಸುವ ಪರಿಸ್ಥಿತಿ ಒದಗಿದೆ.ದಯಮಾಡಿ ಸಂಬಂಧಿಸಿದ ಅಧಿಕಾರಿಗಳು,ಸಂಚಾರಿ ಪೇೂಲೀಸರು, ಗುತ್ತಿಗೆದಾದರರೂ ತಾತ್ಕಾಲಿಕವಾಗಿಯಾದರೂ ಇದಕ್ಕೆ ರೇಡಿಯಂ ಪ್ರತಿಫಲಕಗಳನ್ನು (Radium Reflector )ಅಳವಡಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕಾಗಿ ಕೋರಿರುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!