ಫೆಬ್ರವರಿ 16 ಕ್ಕೆ ರಥೋತ್ಸವ ಹಿನ್ನೆಲೆ,ಗುರುಕೊಟ್ಟೂರೇಶ್ವರ ರಥದ ಗಡ್ಡೆಗೆ ಪೂಜೆ

On 16th of February Rahotsava background, worship to Gurukottureshwar Rath

ಕೊಟ್ಟೂರು: ಐತಿಹಾಸಿಕ ವಿಜಯನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರ ಕೊಟ್ಟೂರಿನಲ್ಲಿ ಪವಾಡಪುರುಷ ಶ್ರೀಗುರು ಕೊಟ್ಟೂರೇಶ್ವರರ ರಥೋತ್ಸವ ಫೆಬ್ರವರಿ 16 ರಂದು ಜರುಗಲಿದೆ. ಇಂದು ಸಂಜೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಭಕ್ತರ ಆರಾಧ್ಯದೈವ ಶ್ರೀ ಗುರುಕೊಟ್ಟೂರೇಶ್ವರ ರಥದ ಗಡ್ಡೆಯನ್ನು ಹೊರಹಾಕಲಾಯಿತು.

ನೆರೆದಿದ್ದ ಭಕ್ತರು “ಶ್ರೀ ಗುರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ… ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್‌…’ ಎಂಬ ಜಯಘೋಷ ಮೊಳಗಿಸುತ್ತ ರಥದ ಗಡ್ಡೆಯನ್ನು ಹೊರಹಾಕಲಾಯಿತು.

ಮುಂದಿನ ತಿಂಗಳು ಫೆಬ್ರವರಿ 12 ರಿಂದ ಫೆಬ್ರವರಿ 20ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.

ದಿನಾಂಕ :12.02.2023 ಭಾನುವಾರ ರಾತ್ರಿ ಬೆಳ್ಳಿ ರಥದಲ್ಲಿ ನಾಗರೋತ್ಸವ,
ದಿನಾಂಕ:13.2.2023 ಸೋಮವಾರ ರಾತ್ರಿ ನವಿಲು ವಾಹನೋತ್ಸವ,
ದಿನಾಂಕ:14.02.2023 ಮಂಗಳವಾರ ರಾತ್ರಿ ಗಜವಾಹನೋತ್ಸವ,
ದಿನಾಂಕ: 15,2.2023 ಬುಧವಾರ ರಾತ್ರಿ ವೃಷಭ ವಾಹನೋತ್ಸವ ಜರುಗಲಿದ್ದು,
ದಿನಾಂಕ 16.2023 ಗುರುವಾರ ಸಾಯಂಕಾಲ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ.
17.2.2023ನೇ ಶುಕ್ರವಾರ ರಾತ್ರಿ ಮದಾಲ್ಸಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!