ಡಿ 19 ರಂದು ಶ್ರೀ ಮಡಿವಾಳ ಮಾಚಿದೇವ ಕಡೇ ಕಾರ್ತಿಕೋತ್ಸವ

ದಾವಣಗೆರೆ: ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಹಾಗೂ ಮಡಿಕಟ್ಟೆ ಸಮಿತಿ, ಮಾಚಿದೇವ ಮಹಿಳಾ ಸಂಘದ ವತಿಯಿಂದ ಶ್ರೀ ಮಡಿವಾಳ ಮಾಚಿದೇವ ಕಡೇ ಕಾರ್ತಿಕೋತ್ಸವ ಮತ್ತು ಪಳಹಾರ ವಿನಿಯೋಗವು ಡಿ.೧೯ರಂದು ನಡೆಯಲಿದ್ದು, ಅಂದು ಸಂಜೆ ೬:೩೦ಕ್ಕೆ ಶ್ರೀ ಸ್ವಾಮಿಗೆ ಅಭಿಷೇಕ ಹಾಗೂ ಸಂಜೆ ೭:೩೦ಕ್ಕೆ ದೀಪಾಲಂಕಾರ ಜರುಗಲಿದೆ.
ಮಡಿವಾಳ ಸಮಾಜದ ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾರ್ಯಾರ್ಥ ದೇಣಿಗೆ ಸಂಗ್ರಹಣೆ ನಡೆಯುತ್ತಿದ್ದು, ಧನ ಸಹಾಯ ಮಾಡಲಿಚ್ಛಿಸುವವರು ಬ್ಯಾಂಕ್ ಆಫ್ ಬರೋಡ, ಖಾತೆ ಸಂಖ್ಯೆ:೧೩೩೩೦೧೦೦೦೦೩೨೯೪, ಐಎಫ್‌ಎಸ್‌ಸಿ ಕೋಡ್: BARBODAVNG ಖಾತೆಗೆ ಹಣ ನೀಡುವಂತೆ ಸಂಘ ಮನವಿ ಮಾಡಿದೆ.