Mock Dance: ಸೆಪ್ಟೆಂಬರ್ 27 ರಂದು ನಮನ ಅಕಾಡೆಮಿ ವತಿಯಿಂದ ‘ಸ್ವಾತಂತ್ರ್ಯ ನಮನ’ ನೃತ್ಯ ರೂಪಕ

IMG-20210925-WA0014

 

ದಾವಣಗೆರೆ: ಕನ್ನಡ ಮತ್ತು ಸಂಸ್ಕೃತ ಇಲಾಖೆ ಮತ್ತು ನಮನ ಅಕಾಡೆಮಿ ಇವರ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನೃತ್ಯರೂಪಕ ‘ಸ್ವಾತಂತ್ರ್ಯ ನಮನ’ ಕಾರ್ಯಕ್ರಮವು ಇದೇ ಸೆ. 27 ರಂದು ಸಂಜೆ 6:30ಕ್ಕೆ ಇಲ್ಲಿನ ಎಸ್‌ಎಸ್ ಲೇಔಟ್ ಬಿ ಬ್ಲಾಕ್‌ನಲ್ಲಿರುವ ಲಿಟ್ಲ್ ಚಾಂಪ್ ಗುರುಕುಲಂ ನಲ್ಲಿ ಆಯೋಜಿಸಲಾಗಿದೆ.

ಡಿ.ಕೆ. ಮಾಧವಿ ಅವರು ನೃತ್ಯರೂಪಕದ ಪರಿಕಲ್ಪನೆ, ವಿನ್ಯಾಸ ಮತ್ತು ನೃತ್ಯ ಸಂಯೋಜನೆಯನ್ನು ಮಾಡಿದ್ದು, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಜಿ.ಎಸ್. ಬನಶ್ರೀ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಎಜು ಏಷ್ಯ ಸ್ಕೂಲ್‌ನ ಕೋ-ಆರ್ಡಿನೇಟರ್ ಸಹನ ಸಂತೋಷ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ನಮನ ಅಕಾಡೆಮಿಯ ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸುವರು.

ನಮನ ಅಕಾಡೆಮಿ ಫೇಸ್‌ಬುಕ್ ಪೇಜ್‌ನಲ್ಲಿ ನೃತ್ಯರೂಪಕದ ನೇರಪ್ರಸಾರವು ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!