ಗ್ರಾಪಂ ಸದಸ್ಯರಾಗಿ ಒಂದು ವರ್ಷ: ಪ್ರಾಮಾಣಿಕ ಸೇವೆಗೆ ಸಹಕರಿಸಿದ್ದಕ್ಕೆ ಧನ್ಯವಾದಗಳು – ಹಿರೇಮುಗದೂರ ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ

 

ಹಾವೇರಿ : ಗ್ರಾಪಂ ಸದಸ್ಯರಾಗಿ ಒಂದು ವರ್ಷ ಆಗಿದ್ದು, ಈ ಕೆಲಸದ ಅವಧಿಯಲ್ಲಿ ತಮ್ಮೆಲ್ಲರ ಸಹಾಯ,ಸಹಕಾರ ಹಾಗೂ ಬೆಂಬಲದಿಂದ ಸಾಧ್ಯವಾದ ಮಟ್ಟಕ್ಕೆ ಕೆಲಸ ಮಾಡುವ ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ‌ ಎಂಬ ತೃಪ್ತಿ ನನಗಿದೆ ಎಂದು ಹಿರೇಮುಗದೂರ ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಸೇವೆ ಮಾಡುವ ಅವಕಾಶ ನೀಡಿದ ತಮ್ಮೆಲ್ಲರಿಗೂ ಋಣಿಯಾಗಿವೆ ಹಾಗೂ ಅಬಾರಿಯಾಗಿರುವೆ. ಜನರ ಪರವಾಗಿ ಕೆಲಸ ಮಾಡುವ ಹಂಬಲದಿಂದ ಸ್ಪರ್ಧೆ ಮಾಡಲಾಗಿದ್ದು, ಜನರ ಆರ್ಶಿವಾದದಿಂದ ಗ್ರಾಪಂ ಸದಸ್ಯನಾಗಿ ದಿ.30 ಒಂದು ವರ್ಷವಾಗಿದೆ.ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಕೆಲಸ ಮಾಡುವ ಅವಕಾಶಕ್ಕಾಗಿ ಸರ್ವರಿಗೂ ಧನ್ಯವಾದಗಳು ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಗ್ರಾಮದಲ್ಲಿಶೈಕ್ಷಣಿಕ,ಸಾಮಾಜಿಕ, ಮೂಲಭೂತ ಸೌಕರ್ಯಗಳ ಜೊತೆಗೆ ಮಾಡುವ ಕಾರ್ಯಗಳು ಇನ್ನೂ ಬಹಳ ಇವೆ. ನಿರಂತರವಾಗಿ ಶ್ರಮವಹಿಸಿ ಕೆಲಸ ಮಾಡಲು ಸಿದ್ದನಿದ್ದು, ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ನಿರೀಕ್ಷಿಸುತ್ತೇನೆ ಎಂದು ಗ್ರಾಪಂ ಸದಸ್ಯ ನಿಂಗಪ್ಪ ಎಂ ಆರೇರ ಮತದಾರರಿಗೆ ಹಾಗೂ ಊರಿನ ಗ್ರಾಮಸ್ಥರಿಗೆ ಹೃದಯ ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!