ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನ

ದಾವಣಗೆರೆ: 2022ನೇ ಸಾಲಿನ ರಾಷ್ಟçಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಮೇ.31ರಂದು ಸುತ್ತೋಲೆ ಹೊರಡಿಸಿದೆ.
2022ನೇ ಸಾಲಿನ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಹ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಆನ್‌ಲೈನ್ (http://nationalawardstoteachears.education.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 01, 2022 ರಿಂದ ಜೂನ್ 20ರ, 2022 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಸರ್ಕಾರ ಯಾವ ಶಿಕ್ಷಕರು ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದ್ದಾರೆ.
ಅಂದರೆ ಉಲ್ಲೇಖಿತ ಪತ್ರ ಮತ್ತು ತತ್ಸಂಬ0ಧಿ ಅಂತರ್ಜಾಲ ತಾಣದಲ್ಲಿನ ಅಂಶಗಳ0ತೆ ರಾಜ್ಯ ಸರ್ಕಾರದ ಮತ್ತು ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿನ, ಪದವಿ ಪೂರ್ವ ಕಾಲೇಜುಗಳಲ್ಲಿನ ಖಾಯಂಗೊ0ಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರು, ಕೇಂದ್ರ ಸರ್ಕಾರದ ಮತ್ತು ಸಿಬಿಎಸ್‌ಇ ಹಾಗೂ ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳ, ಪದವಿ ಪೂರ್ವ ಕಾಲೇಜುಗಳ ಖಾಯಂಗೊ0ಡ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ದಿನಾಂಕ 30-04-2022ರವರೆಗೆ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ಮೇಲ್ಕಂಡ ಶಾಲೆಗಳ, ಪದವಿ ಪೂರ್ವ ಕಾಲೇಜುಗಳಲ್ಲಿ ಖಾಯಂಗೊ0ಡಿದ್ದ ಮತ್ತು ಮನೆಪಾಠದಲ್ಲಿ ತೊಡಗಿಸಿಕೊಂಡಿರದಿದ್ದ ಶಿಕ್ಷಕರು, ಉಪನ್ಯಾಸಕರು, ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ-2022” ಪ್ರಶಸ್ತಿಗೆ ಆಯ್ಕೆಯಾಗಬಯಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
garudavoice21@gmail.com 9740365719