ಆನ್ ಲೈನ್ ಮೂಲಕ ಖಾತೆಗೆ ಖನ್ನ: ₹ 72 ಸಾವಿರ ದೋಚಿದ ದುಷ್ಕರ್ಮಿ

ದಾವಣಗೆರೆ: ಸಿಮ್ ಕಾರ್ಡ್ ನ್ನು ರಿಚಾರ್ಜ್ ಮಾಡಬೇಕೆಂದು ಹೇಳಿ ನಿವೃತ್ತ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ ₹ 72 ಸಾವಿರ ರೂ., ಆನ್ ಲೈನ್ ಮೂಲಕ ದೋಚಿರುವ ಘಟನೆ ನಡೆದಿದೆ.
ಹರಿಹರದ ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ನೌಕರ ಪಿ. ಮೋಹನ್ ಎಂಬುವವರಿಗೆ ದುಷ್ಕರ್ಮಿಯೊಬ್ಬ ಬಿಎಸ್ ಎನ್ಎಲ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ ನಿಮ್ಮ ಸಿಎಮ್ ಗೆ ಕೆವೈಸಿ ಮಾಡಿಸಬೇಕೆಂದು ನಂಬಿಸಿ, ಕ್ವಿಕ್ ಸಪೋರ್ಟ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ತಿಳಿಸಿದ್ದಾನೆ. ನಂತರ 10 ರೂ.,ರಿಚಾರ್ಜ್ ಮಾಡಿಸುವಂತೆ ಹೇಳಿದಾಗ, ಮೋಹನ್ ಅವರು ತಮ್ಮ ಗೂಗಲ್ ಪೇ ನಲ್ಲಿ ರಿಚಾರ್ಜ್ ಮಾಡಿದ್ದಾರೆ. ನಂತರದ ಒಂದೆರಡು ತಾಸಿನಲ್ಲಿ ಹಂತ ಹಂತವಾಗಿ ಒಟ್ಟು 72 ಸಾವಿರ ರೂ., ಬ್ಯಾಂಕ್ ಖಾತೆಯಿಂದ ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ.
ಆನ್ ಲೈನ್ ಕಳ್ಳನನ್ನು ಬಂಧಿಸಿ ತಮಗೆ ನ್ಯಾಯ ಒದಗಿಸುವಂತೆ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.