ಭ್ರಷ್ಟಾಚಾರದ ಕಳಂಕ ಇಲ್ಲದವರೇ ಸ್ಪರ್ಧಿ; ಗಾಂಧಿನಗರದಲ್ಲಿ ಸಪ್ತಗಿರಿಗೌಡರಿಗೆ ಬಿಜೆಪಿ ಟಿಕೆಟ್; ಹೈಕಮಾಂಡ್ ಒಲವು

ಭ್ರಷ್ಟಾಚಾರದ ಕಳಂಕ ಇಲ್ಲದವರೇ ಸ್ಪರ್ಧಿ; ಗಾಂಧಿನಗರದಲ್ಲಿ ಸಪ್ತಗಿರಿಗೌಡರಿಗೆ ಬಿಜೆಪಿ ಟಿಕೆಟ್; ಹೈಕಮಾಂಡ್ ಒಲವು

ದೆಹಲಿ: ಕರ್ನಾಟಕದ ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಅಖಾಡವೆನಿಸಿರುವ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವೆನಿಸಲಿದೆ. ಸೋಲಿಲ್ಲದ ಸರದಾರನಂತೆ ನಿರಂತರ ಗೆಲುವಿನ ನಗೆ ಬೀರುತ್ತುರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರನ್ನು ಸೋಲಿಸಲು ಬಿಜೆಪಿ ಪಣ ತಿಟ್ಟಿದ್ದು ಈ ಬಾರಿ ಸಪ್ತಗಿರಿ ಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಬಿಜೆಪಿ ದೆಹಲಿ ಕಚೇರಿ ಮೂಲಗಳು ತಿಳಿಸಿವೆ.
ಗಾಂಧಿನಗರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತಿರುವ ಸಪ್ತಗಿರಿಗೌಡರಿಗೆ ಈ ಬಾರಿಯೂ ಟಿಕೆಟ್ ನೀಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಪ್ತಗಿರಿ ಗೌಡ ಅವರು ಚಿಕ್ಕಪೇಟೆ, ಬಳೇಪೇಟೆ, ಗಾಂಧಿನಗರ ಸಹಿತ ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡು ಸಂಚಲನ ಮೂಡಿಸಿದ್ದಾರೆ.

ದಿನೇಶ್ ಸೋಲಿಸುವುದು ಕಠಿಣ; ಸ್ಪರ್ಧೆಗೆ ಚಾರಿತ್ರ್ಯವಂತರೇ ಸೂಕ್ತ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿ ಮಾಜಿ ಸಚಿವ ರಾಮಚಂದ್ರಗೌಡರ ಪುತ್ರ ಸಪ್ತಗಿರಿಗೌಡ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ತೀವ್ರ ಲಾಭಿ ನಡೆಸಿದ್ದಾರೆ. ಈ ಇಬ್ಬರು ನಾಯಕರೂ ಈಗಾಗಲೇ ಪ್ರಚಾರ ಕೈಗೊಂಡಿದ್ದಾರಾದರೂ ಭ್ರಷ್ಟಾಚಾರ ಕಳಂಕ ಇಲ್ಲದ ಸಪ್ತಗಿರಿ ಬಗ್ಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ.

ಕೃಷ್ಣಯ್ಯ ಶೆಟ್ಟಿ ಸ್ಪರ್ಧೆಗೆ ಭ್ರಷ್ಟಾಚಾರ ಕೇಸ್ ಅಡ್ಡಿ?
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಒಲವು ಕೃಷ್ಣಯ್ಯ ಶೆಟ್ಟಿ ಅವರಿಗಿಂತ ಸಪ್ತಗಿರಿಗೌಡರತ್ತ ಹೆಚ್ಚಿದೆ ಎನ್ನಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿನೇಶ್ ಗುಂಡೂರಾವ್ ವಿರುದ್ದ ಸಪ್ತಗಿರಿ ಗೌಡ ಸೋತಿದ್ದರೂ ಅವರದ್ದು ವೀರೋಚಿತ ಸೋಲು. ಚುನಾವಣೆಯಲ್ಲಿ ಸೋತ ನಂತರವೂ ಕ್ಷೇತ್ರದ ಜನರ ಕಷ್ಟ-ಸಂಕಷ್ಠಗಳಿಗೆ ಅವರು ಸ್ಪಂಧಿಸುತ್ತಾ ಬಂದಿದ್ದಾರೆ ಎಂಬುದು ಅವರಿಗಿರುವ ಪ್ಲಸ್ ಪಾಯಿಂಟ್. ಸಪ್ತಗಿರಿ ಗೌಡರು ಈ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಸಿದ್ದು, ಕ್ಷೇತ್ರದ ಜನತೆ ಬದಲಾವಣೆ ತರುವ ಮೂಡ್‌ನಲ್ಲಿ ಇರುವಾಗಲೇ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ ಎಂಬುದು ಸ್ಥಳೀಯ ಬಿಜೆಪಿಗರ ಮಾತುಗಳು.
ಈ ಮಧ್ಯೆ, ಗಾಂಧಿನಗರ ಕ್ಷೇತ್ರದ ಜನರು ಕಳಂಕಿತರು ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿರುವ ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನೀಡದಂತೆ ಬಿಜೆಪಿಯ ಅನೇಕರು ವರಿಷ್ಠರು ಮೇಲೆ ಒತ್ತಡ ತಂದಿದ್ದಾರೆ.
ಈ ಮಧ್ಯೆ, ಹಿಂದಿನ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಕೃಷ್ಣಯ್ಯ ಶೆಟ್ಟಿ ಇದೀಗ ಸ್ವಾರ್ಥ ಸಾಧನೆಗಾಗಿ ಬಿಜೆಪಿಗೆ ಬಂದಿದ್ದಾರೆ ಎಂಬುದೂ ಹಲವರ ಅಭಿಪ್ರಾಯ. ಒಂದು ವೇಳೆ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿಯು ಭ್ರಷ್ಟಾಚಾರ ಕೇಸ್‌ನಲ್ಲಿ ಜೈಲು ಸೇರಿದವರಿಗೆ ಪ್ರೋತ್ಸಾಹ ನೀಡಿದ್ದಾರೆಂಬ ಕಳಂಕವನ್ನು ಮೆತ್ತಿಕೊಂಡಂತಾಗುತ್ತದೆ ಎಂಬುದು ಪ್ರಮುಖರ ವಾದ. ಈ ಕುರಿತಂತೆ ಬಿಜೆಪಿ ಹಾಗೂ RSS ವರಿಷ್ಠರಿಗೆ ಹಲವಾರು ದೂರುಗಳು ಸಲ್ಲಿಕೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಸಪ್ತಗಿರಿ ಗೌಡರಿಗೆ ಟಿಕೆಟ್ ಅಂತಿಮಗೊಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಚೇರಿ ಮೂಲಗಳು ತಿಳಿಸಿವೆ.

ಸಪ್ತಗಿರಿ ಗೌಡ ಪಾಳಯದಲ್ಲಿ ಸಂತಸ:
ಕೃಷ್ಣಯ್ಯ ಶೆಟ್ಟಿ ಅವರಿಗೆ ಯಡಿಯೂರಪ್ಪ ಅವರ ಕೃಪೆ ಇದೆ ಎಂದೇ ಹೇಳಲಾಗುತ್ತಿತ್ತು. ಆದರೆ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಎದುರಿಸಿರುವ ಕಾರಣಕ್ಕಾಗಿ ಕೃಷ್ಣಯ್ಯ ಶೆಟ್ಟಿ ಅವರಿಗೆ ಟಿಕೆಟ್ ನೀಡಲು ವರಿಷ್ಠರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ಖಾತ್ರಿಯಾಗುತ್ತಿರಿವ ಮಾಹಿತಿ ಹಿನ್ನೆಲೆಯಲ್ಲಿ ಸಪ್ತಗಿರಿಗೌಡರ ಬಳಗ ಹುಮ್ಮಸ್ಸಿನಲ್ಲಿದೆ. ಜೊತೆಗೆ ಪ್ರಚಾರವನ್ನೂ ಬಿರುಸುಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!