ಓಪನ್ ರಾಪಿಡ್ ಚೆಸ್ ಪಂದ್ಯಾವಳಿ ವಿಜೇತ ಶಿವಮೊಗ್ಗದ ಚಿರಂತ್ ಎಂ ಡಿ

ದಾವಣಗೆರೆ: ಜಿಲ್ಲಾ ಚೆಸ್ ಅಸೋಸಿ ಯೇಷನ್ (ರಿ) ವತಿಯಿಂದ ರಾಜ್ಯಮಟ್ಟದ ಓಪನ್ ರಾಪಿಡ್ ಚೆಸ್ ಪಂದ್ಯಾವಳಿಯ ಮೊದಲ ಸ್ಥಾನವನ್ನು ಪಡೆದ ಶಿವಮೊಗ್ಗ ಚಿರಂತ್ ಎಂ ಡಿ ಅವರಿಗೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಬಿ ಮಂಜಪ್ಪನವರು ಹಾಗೂ ದಿನೇಶ್ ಕೆ ಶೆಟ್ಟಿ ಅವರು ಪ್ರಶಸ್ತಿಯನ್ನು ವಿತರಿಸಿದರು
ನಂತರದ ಸ್ಥಾನ ಪಡೆದಚಿತ್ರದುರ್ಗದ ತೇಜಸ್ ಹಾಗೂ ಸಿರಸಿ ರಾಮಚಂದ್ರ ಭಟ್ ಅವರಿಗೆ ನಗದು ಹಾಗೂ ಪಾರಿತೋಷಕ ವಿತರಿಸಲಾಯಿತು
ಹಾಗೂ ವಿಶೇಷ ಬಹುಮಾನವಾಗಿ ಮಕ್ಕಳಿಗೆ ಟ್ರೋಫಿ ಹಾಗೂ ನಗದು ಬಹುಮಾನವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಬಿ ಮಂಜಪ್ಪ ಹಾಗೂ ಸಂಘದ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಮಕ್ಕಳಿಗೆ ಹಾಗೂ ನಗದು ಬಹುಮಾನವನ್ನು ವಿತರಿಸಿದ್ದರು ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಯುವರಾಜ್ ಮಂಜುಳಾ ಯುವರಾಜ್ ಉಪಸ್ಥಿತರಿದ್ದರು