Order: ಧರ್ಮ ಸಂಘಟಕ ಸತೀಶ್ ಪೂಜಾರಿಗೆ ಗ್ಯಾರಂಟಿ ಆಯ್ತು ಗಡಿಪಾರು ಆದೇಶ

ದಾವಣಗೆರೆ: (Order) ದಾವಣಗೆರೆ ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಗಡಿಪಾರು ಮಾಡಲಾಗಿದೆ.ಸತೀಶ ಪೂಜಾರಿ, ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಸಹ ಸಂಚಾಲಕರಾಗಿದ್ದರು.
ಬೀದರ್ ಜಿಲ್ಲೆ ಮಂಟಾಳ ಪೊಲೀಸ್ ಠಾಣೆಗೆ ನಿತ್ಯ ಹಾಜರಾಗಲು ಆದೇಶಿಸಿ ಗಡಿಪಾರು ಮಾಡಿ ಆದೇಶ ಹೊರಡಿಸಿದ ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷಕುಮಾರ್. ಸತೀಶ್ ಪೂಜಾರಿ ವಿರುದ್ಧ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಗಡಿಪಾರು ಸಂಬಂಧ ದಾವಣಗೆರೆ ಪೋಲಿಸ್ ಇಲಾಖೆಯಿಂದ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ವಿಚಾರಣೆ ಮಾಡಿ ಸತೀಶ್ ಪೂಜಾರಿಯನ್ನು ಸೆಪ್ಟೆಂಬರ್ 22ರಂದು ಗಡಿಪಾರು ಆದೇಶದಂತೆ ಬೀದರ್ ಜಿಲ್ಲೆ ಮಂಟಾಳ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
22 ಸೆಪ್ಟೆಂಬರ್ 2025 ರಿಂದ 2026ರ ಜನವರಿ 31ರವರೆಗೆ ಗಡಿಪಾರಿಗೆ ಆದೇಶಿಸಲಾಗಿದೆ, ದಾವಣಗೆರೆ ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕೇಸ್ ದಾಖಲಾಗಿದ್ವು, ಪೊಲೀಸ್ ಇಲಾಖೆ ಪ್ರಸ್ತಾವನೆ ವಿಚಾರಣೆ ಮಾಡಿ ಗಡಿಪಾರಿಗೆ ಆದೇಶ ಮಾಡಲಾಗಿದೆ ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷಕುಮಾರ್ ತಿಳಿಸಿದರು.
ಗಡಿಪಾರು ಪ್ರಸ್ತಾವನೆ:
ಸತೀಶ್ ಪೂಜಾರಿ ತಂದೆ ಗೋಪಾಲ್ ಪೂಜಾರಿ, # 338/3, 17ನೇ ಕ್ರಾಸ್, ಕೆಟಿಜೆ ನಗರ, ದಾವಣಗೆರೆ
ಈತನನ್ನು ಪೋಲೀಸ್ ಕಾಯ್ದೆ 1963 ರ ಕಲಂ 55 ರಡಿ ದಾವಣಗೆರೆ ಜಿಲ್ಲೆಯಿಂದ ಬೇರೆ ಜಿಲ್ಲೆಯ ವ್ಯಾಪ್ತಿಗೆ
ಗಡಿಪಾರು ಮಾಡಲು ಪೋಲೀಸ್ ಅಧೀಕ್ಷಕರು, ದಾವಣಗೆರೆ ಇವರು ಉಲ್ಲೇಖ (3)ರಂತೆ ಈ ಪ್ರಾಧಿಕಾರಕ್ಕೆ
ಪುಸ್ತಾವನೆ ಸಲ್ಲಿಸಿದ್ದು, ಸದರಿ ಪುಸ್ತಾವನೆಯನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ಕರ್ನಾಟಕ
ಪೋಲೀಸ್ ಕಾಯ್ದೆ 1963 ರ ಕಲಂ 55 ರಡಿ ಗಡಿಪಾರು ಮಾಡುವ ಕುರಿತು ಕಲಂ 58 ರೀತ್ಯಾ ಆಪಾದಿತನಿಗೆ ಏಕೆ
ಗಡಿಪಾರು ಮಾಡಬಾರದು ಎಂಬ ಬಗ್ಗೆ ವಿಚಾರಣೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟೀಸ್ ನೀಡಿದ್ದು,
ದಿನಾಂಕ: 4.9.2025, 8.9.2025 ಮತ್ತು 15.9.2025 ರಂದು ವಿಚಾರಣೆ ನಡೆಸಿ ಲಭ್ಯ ದಾಖಲಾತಿಗಳ ಆಧಾರದ
ಮೇಲೆ ಆದೇಶಕ್ಕಾಗಿ ಕಾಯ್ದಿರಿಸಲಾಯಿತು.
ಪೋಲೀಸ್ ಆಧೀಕ್ಷಕರು, ದಾವಣಗೆರೆ ಇವರು ಸತೀಶ್ ಪೂಜಾರಿ, ದಾವಣಗೆರೆ ಇವರ ಮೇಲೆ ಈ
ಕೆಳಕಂಡಂತೆ ವರದಿ ಸಲ್ಲಿಸಿರುತ್ತಾರೆ.
ಪೋಲಿಸ್ ಇಲಾಖೆಯ ವರದಿ:
ದಾವಣಗೆರೆ ನಗರದ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ & ಕಮ್ಯೂನಲ್
ಗುಂಡಾ ಆಸಾಮಿಯಾದ ಸತೀಶ್ ಪೂಜಾರಿ ತಂದೆ ಗೋಪಾಲ್ ಪೂಜಾರಿ, 43 ವರ್ಷ, ವ್ಯಾಪಾರ ವೃತ್ತಿ, ಈಡಿಗ
ಜನಾಂಗ ವಾಸ # 338/3, 17 ನೇ ಕ್ರಾಸ್, ಕೆಟಿಜೆ ನಗರ, ದಾವಣಗೆರೆ ಈತನು ಕೆಟಿಜೆ ನಗರ ಪೊಲೀಸ್ ಠಾಣೆ
ವ್ಯಾಪ್ತಿಯಲ್ಲಿ ವಾಸವಾಗಿದ್ದು, ಈತನ ವಿರುದ್ಧ ದಾವಣಗೆರೆ ನಗರದ ಕೆಟಿಜೆ ನಗರ, ಬಡಾವಣೆ, ಬಸವನಗರ,
ಅಜಾದ್ ನಗರ, ಆರ್‌ಎಂಸಿ ಠಾಣೆ, ವಿದ್ಯಾನಗರ & ಹರಿಹರ ನಗರ & ಚಿಕ್ಕಬಳ್ಳಾಪುರ ಜಿಲ್ಲೆಯ
ಗೌರಿಬಿದನೂರು ನಗರ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಗದ ಜನರ ಧಾರ್ಮಿಕ/ಮತೀಯ ನಂಬಿಕೆಗಳಿಗೆ
ಅಪಮಾನಗೊಳಿಸಿ, ಧಕ್ಕೆಯನ್ನುಂಟು ಮಾಡಿದ ಬಗ್ಗೆ ಪುಕರಣಗಳು ದಾಖಲಾಗಿರುತ್ತವೆ. ಸತೀಶ ಪೂಜಾರಿ
ಆಟೋ ಚಾಲಕ ವೃತ್ತಿ ಮಾಡಿಕೊಂಡು ಇದರ ಜೊತೆಗೆ ಹಿಂದೂ ಸಂಘಟನೆಗಳಲ್ಲಿ ಸಕ್ರಿಯ
ಕಾರ್ಯಕರ್ತನಾಗಿ ಗುರುತಿಸಿಕೊಂಡು ಹಿಂದೂಜಾಗರಣ ವೇದಿಕೆ ಸೇರಿದನು. ಸಂಘಟನೆಯ ಎಲ್ಲಾ
ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಈತನು ಮೊದಲು ಸಂಘಟನೆಯಲ್ಲಿ ದಾವಣಗೆರೆ ಜಿಲ್ಲಾ
ಸಂಚಾಲಕರಾಗಿ 07 ವರ್ಷ ಕಾರ್ಯ ನಿರ್ವಹಿಸಿದನು. ಪ್ರಸ್ತುತ ಹಿಂದೂ ಜಾಗರಣ ವೇದಿಕೆಯ ದಕ್ಷಿಣ
ವಿಭಾಗೀಯ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಈತನು ಸಂಘಟನೆಯಲ್ಲಿ ಸಕ್ರಿಯನಾಗಿ
ತೊಡಗಿಸಿಕೊಂಡಿದ್ದು ಸಂಘಟನೆಯ ಕೆಲಸಗಳಿಗೆ ಆಗಾಗ ಶಿವಮೊಗ್ಗ, ಉತ್ತರ ಕನ್ನಡ ಗಳಿಗೆ ತೆರಳುತ್ತಿರುತ್ತಾನೆ.
ಆದ್ದರಿಂದ ಸಾಮಾಜಿಕ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ
ಸಾಧ್ಯತೆ ಇದ್ದು, ಈತನ ವಿರುದ್ಧ ಕಮ್ಯೂನಲ್ ರೌಡಿ ಹಾಳೆಯನ್ನು ದಿನಾಂಕ:08.09.2008 ರಿಂದ ಕೆಟಿಜೆ ನಗರ
ಠಾಣೆಯಲ್ಲಿ ನಿರ್ವಹಿಸುತ್ತಿದ್ದು, ದಿನಾಂಕ:15.05.2017 ರಿಂದ ಬಸವನಗರ ಪೊಲೀಸ್ ಠಾಣೆಯಲ್ಲಿ “ಬಿ” ರೌಡಿ
ಹಾಳೆಯನ್ನು ತೆರೆದಿದ್ದು ದಿನಾಂಕ:18.07.2024 ರಂದು ಬಸವನಗರ ರೌಡಿ ಹಾಳೆಯನ್ನು ಕೆಟಿಜೆ ನಗರ ಠಾಣೆಗೆ
ಕಳುಹಿಸಿಕೊಟ್ಟಿದ್ದು ಸ್ವೀಕರಿಸಿಕೊಂಡಿದ್ದು ನಿರಂತರವಾಗಿ ನಿಗಾವಹಿಸಲಾಗಿದ್ದರೂ ಸಹ ಪದೇ ಪದೇ ಒಂದು
ವರ್ಗದ ಜನರ ಧಾರ್ಮಿಕ/ಮತೀಯ ನಂಬಿಕೆಗಳಿಗೆ ಅಪಮಾನಗೊಳಿಸಿ, ಧಕ್ಕೆಯನ್ನುಂಟು ಮಾಡುತ್ತಿರುತ್ತಾನೆ.
ಈತನ ವಿರುದ್ಧ ದಾಖಲಾದ ಪ್ರಕರಣಗಳ ಸಂಕ್ಷಿಪ್ತ ವಿವರ ಮತ್ತು ಪುಸ್ತುತ ಹಂತದ ವಿವರ ಈ ಎಂದು ವರದಿಸಿರುತ್ತಾರೆ.
ಗಡಿಪಾರು ಆದೇಶ:
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಸಂತೋಷ್‌ಕುಮಾರ್ ಕೆ.ಎ.ಎಸ್., ಉಪವಿಭಾಗೀಯ ದಂಡಾಧಿಕಾರಿ,
ದಾವಣಗೆರೆ ಉಪವಿಭಾಗ, ದಾವಣಗೆರೆ ಆದ ನಾನು ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ ಸತೀಶ್
ಪೂಜಾರಿ ತಂದೆ ಗೋಪಾಲ ಪೂಜಾರಿ, #338/3, 17ನೇ ಕ್ರಾಸ್, ಕೆಟಿಜೆ ನಗರ, ದಾವಣಗೆರೆ ಈತನನ್ನು ದಿನಾಂಕ:
22.09.2025 ರಿಂದ ಜಾರಿಗೆ ಬರುವಂತೆ ದಿನಾಂಕ:31.01.2026 ರ ಮಧ್ಯರಾತ್ರಿ 12 ಗಂಟೆಯವರೆಗೆ ದಾವಣಗೆರೆ
ಉಪವಿಭಾಗದ ವ್ಯಾಪ್ತಿಯಿಂದ ಗಡಿಪಾರು ಮಾಡಿ ಆದೇಶಿಸಿದೆ.
ಆರೋಪಿಯನ್ನು ದಾವಣಗೆರೆ ಉಪವಿಭಾಗದ ಗಡಿಯಿಂದ ಬೀದರ್ ಜಿಲ್ಲೆ, ಮಂಟಾಳ ಪೊಲೀಸ್
ಠಾಣೆಯಲ್ಲಿ ನಿತ್ಯ ಹಾಜರಾತಿ ನಿರ್ವಹಿಸುವಂತೆ ನಿಗಧಿಪಡಿಸಿ, ಪೊಲೀಸ್ ಅಭಿರಕ್ಷೆಯಲ್ಲಿ ಸಾಗಾಟ ಮಾಡಿ ಈ
ಕುರಿತಾದ ಮಾಹಿತಿಯನ್ನು ಈ ನ್ಯಾಯಾಲಯಕ್ಕೆ ನೀಡಲು ತಿಳಿಸಿದೆ. ಆರೋಪಿಯು ಈ ಅವಧಿಯಲ್ಲಿ
ದಾವಣಗೆರೆ ಉಪವಿಭಾಗದ ಯಾವುದೇ ಪ್ರದೇಶದಲ್ಲಿ ಕಂಡು ಬಂದಲ್ಲಿ ಕಾನೂನು ಕ್ರಮ
ವಹಿಸಲಾಗುವುದೆಂಬ ನಿಭಂದನೆ ವಿಧಿಸಲಾಗಿದೆ.
ಸದರಿ ಆದೇಶವನ್ನು ಗಣಕೀಕೃತದಾರರಿಗೆ ಉಕ್ತ ಲೇಖನ ನೀಡಿ ಗಣಕೀಕರಿಸಿ, ಗಣಕೀಕೃತ ಪ್ರತಿಯನ್ನು
ಪರಿಷ್ಕರಿಸಲ್ಪಟ್ಟು ನಂತರ ತೆರೆದ ನ್ಯಾಯಾಲಯದಲ್ಲಿ ದಿನಾಂಕ:22/09/2025 ದಂದು ಘೋಷಿಸಲಾಯಿತು ಎಂದು ಆದೇಶ ಮಾಡಲಾಗಿದೆ.