ಪಿ.ಬಿ.ರಸ್ತೆ ಹಾಗೂ ಶಂಕರ್ ವಿಹಾರ್ ಬಡಾವಣೆ ರಸ್ತೆಯಲ್ಲಿ ಗುಜರಿ ಅಂಗಡಿಗಳಿಂದ ಕಸದ ಕಿರಿಕಿರಿ

ದಾವಣಗೆರೆ: ನಗರದ ವಾರ್ಡ್ ನಂ.15ರ ಶಂಕರ್ ವಿಹಾರ್ ಬಡಾವಣೆ ಎ ಬ್ಲಾಕ್, ಪಿ.ಬಿ. ರಸ್ತೆ ಪಕ್ಕ, 8ನೇ ಮುಖ್ಯ ರಸ್ತೆಯಲ್ಲಿ ಗುಜರಿ ಅಂಗಡಿಗಳ ಕಸದ ರಾಶಿಯಿಂದ ಸಾರ್ವಜನಿಕರಿಗೆ ತುಂಬಾ ಕಿರಿ ಕಿರಿಯಾಗುತ್ತಿದ್ದು, ಕ್ರಮ ಕೈಗೊಳ್ಳುವಂತೆ ಸ್ನೇಹಜೀವಿ ಸೇವಾ ಟ್ರಸ್ಟ್ ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.

ಈ ಸ್ಥಳದಲ್ಲಿ ಗುಜರಿ ಅಂಗಡಿಗಳು ಕಸದ ರಾಶಿಯನ್ನು ತುಂಬಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾಹನ ಪಾರ್ಕಿಂಗ್ ಮಾಡಲು ಸಹ ಸವಾರರಿಗೆ ತೊಂದರೆಯಾಗುತ್ತಿದೆ. ಬೇರೆ ವಾಹನಗಳು ಓಡಾಡಲೂ, ಪಾದಚಾರಿಗಳು ನಡೆದಾಡಲೂ ಸ್ಥಳವಿಲ್ಲದಂತೆ ಗುಜರಿ ಅಂಗಡಿಗಳ ವಸ್ತುಗಳು ತುಂಬಿರುತ್ತವೆ.
ಪ್ಲಾಸ್ಟಿಕ್ ವಸ್ತುಗಳು ಹಾಗೂ ವಯರ್ಗಳನ್ನು ಸುಟ್ಟು ಪರಿಸರ ಮಾಲೀನ್ಯವನ್ನೂ ಮಾಡಲಾಗುತ್ತಿದೆ. ಈ ಸಮಸ್ಯೆಯಿಂದ ನಿತ್ಯವೂ ಇಲ್ಲಿನ ನಾಗರಿಕರು ಬೇಸತ್ತಿದ್ದು, ಕ್ರಮ ಕೈಗೊಳ್ಳುವಂತೆ ಸ್ನೇಹ ಜೀವಿ ಸೇವಾ ಟ್ರಸ್ಟ್ ಪಾಲಿಕೆಗೆ ಮನವಿ ಮಾಡಿದೆ.
ಅಲ್ಲದೇ ಮಹಾಗರ ಪಾಲಿಕೆ ನಾಮಫಲಕವೂ ಸಹ ಮುರಿದು ಬಿದ್ದಿದ್ದು ಸರಿ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರುಗಳಿಗೆ ಮನವಿ ಪತ್ರ ಕಳುಹಿಸಲಾಗಿದೆ.
