ಪಾಲಿಕೆ ವ್ಯಾಪ್ತಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಆಗಸ್ಟ್ 31 ರವರೆಗೆ ರಿಯಾಯಿತಿ ವಿಸ್ತರಣೆ

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಲು ಶೇ .5 ರಿಯಾಯಿತಿಯ ಕಾಲಾವಧಿಯನ್ನು ಆ.31 ರವರೆಗೆ ವಿಸ್ತರಿಸಲಾಗಿದೆ.
ಜುಲೈ 31 ರವರೆಗೆ ಮಾತ್ರ ವಿಸ್ತರಿಸಲಾಗಿತ್ತು. ಆದರೆ, ಕೋವಿಡ್ ಪರಿಣಾಮದಿಂದಾಗಿ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿರುವ ಕಾರಣ ಹಾಗೂ ಸಾರ್ವಜನಿಕರ ಆರ್ಥಿಕ ಹಿತದೃಷ್ಟಿಯಿಂದ ಆಸ್ತಿ ತೆರಿಗೆ ಮೇಲಿನ ಶೇ.5 ರಿಯಾಯಿತಿಯನ್ನು ಸರ್ಕಾರದ ಆದೇಶದಂತೆ ಆ. 31 ರವರೆಗೆ ವಿಸ್ತರಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.