ಪಾಲಿಕೆಯ 14 ನೇ ವಾರ್ಡಿನಲ್ಲಿ ದಾಖಲೆಯ ಲಸಿಕಾಕರಣ!

IMG-20210918-WA0030

ದಾವಣಗೆರೆ: ನಗರದಾದ್ಯಂತ ನಡೆದ ಲಸಿಕಾ ಕಾರ್ಯಕ್ರಮದಲ್ಲಿ 14 ನೇ ವಾರ್ಡ್ ನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು, ಪಾಲಿಕೆ ಸದಸ್ಯರು ಹಾಗೂ ಮಾಜಿ ಉಪ ಮಹಾ ಪೌರರಾದ ಕೆ.ಚಮನ್ ಸಾಬ್ ಅವರ ನೇತೃತ್ವದಲ್ಲಿ ದಾಖಲೆಯ 808 ಜನರಿಗೆ ಮೊದಲ ಹಾಗೂ ಎರಡನೇ ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ನಮ್ಮ ವಾರ್ಡನ್ನು ಸಂಪೂರ್ಣ ಲಸಿಕಾ ವಾರ್ಡನ್ನಾಗಿಸಲು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಲಸಿಕೆಯ ಮಹತ್ವವನ್ನು ತಿಳಿಸಿ ಲಸಿಕೆ ಪಡೆಯಲು ಮನವೊಲಿಸಲಾಯಿತು. ಇದರ ಫಲವಾಗಿ ಎಲ್ಲರೂ ಲಸಿಕೆಯನ್ನು ಪಡೆಯಲು ಮುಂದಾಗಿದ್ದರಿಂದ ಒಂದೇ ದಿನಕ್ಕೆ ದಾಖಲೆಯ 808 ಪ್ರಥಮ ಹಾಗೂ ಎರಡನೇ ಡೋಸ್ ಲಸಿಕೆ ನೀಡಲಾಯಿತು ಎಂದು ಹೇಳಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!