2 ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ | 30 ಕ್ಕೆ ಪಂಚಮಸಾಲಿ ರಾಜ್ಯ ಯುವ ಘಟಕ ಅಧ್ಯಕ್ಷರ ಪದಗ್ರಹಣ

IMG-20210927-WA0041

 

ದಾವಣಗೆರೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಇದೇ ಮೂವತ್ತರ ಸಂಜೆ 4.30 ಕ್ಕೆ ತ್ರಿಶೂಲ್ ಕಲಾ ಭವನದಲ್ಲಿ ಹಮ್ಮಿಕೊಂಡಿರುವ ಪ್ರತಿಜ್ಞಾ ಪಂಚಾಯತ್ ದೇವರಾಜ ಅಭಿಯಾನದಲ್ಲಿ ಮಾಜಿ ಮಹಾಪೌರ ಬಿ.ಜೆ.ಅಜಯ್ ಕುಮಾರ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.ಎಂದು 2ಎ ಮೀಸಲಾತಿ ಹೋರಾಟ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಹೆಚ್ಎಸ್ ಶಿವಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 29ರಂದು ಜಗದ್ಗುರು ಜಯಮೃತ್ಯುಂಜಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಮಹಾಂತ ಶಿವಾಚಾರ್ಯ ಜಗದ್ಗುರುಗಳವರ ಜಯಂತೋತ್ಸವ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ನಡೆಯಲಿದೆ.
ನಗರದಲ್ಲಿ ನಡೆಯುವ ಈ ಮಹಾ ಅಭಿಯಾನಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಕೇಂದ್ರ ಮಂತ್ರಿ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ವಿನಯ್ ಕುಲಕರ್ಣಿ ಕಿತ್ತೂರಾಣಿ ಚೆನ್ನಮ್ಮ ಬಳಗದ ರಾಜ್ಯಾಧ್ಯಕ್ಷರಾದ ವೀಣಾ ವಿಜಯಾನಂದ ಕಾಶಪ್ಪ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸಮಾಜದ ಹಾಲಿ ಸಚಿವರು ಮಾಜಿ ಸಚಿವರು ಹಾಲಿ ಶಾಸಕರು ಮಾಜಿ ಶಾಸಕರು ಮಾಜಿ ಸಂಸದರು ಹಾಲಿ ಸಂಸದರು ಗಣ್ಯರು ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಗಾಂಧಿ ವೃತ್ತದಿಂದ ತ್ರಿಶೂಲ್ ಕಲಾಭವನ ದವರೆಗೆ ಬಾಜಾಭಜಂತ್ರಿ ಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದರು.
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರನ್ನು ಅವರ ಸಲಾಗಿದೆ ಅವರು ದೊಡ್ಡವರನ್ನು ಕೇಳಿ ಬರುವುದಾಗಿ ಹೇಳಿದ್ದಾರೆ.
ದೊಡ್ಡವರು ಯಾರು ಎಂಬುದು ನಮಗೂ ಗೊತ್ತಿಲ್ಲ.
ಸಮಾಜದ ಋಣ ತೀರಿಸಲು ಸಂದರ್ಭದಲ್ಲಿ ಸಮಾಜಬಾಂಧವರು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಒತ್ತಾಯಪೂರ್ವಕವಾಗಿ ಯಾರನ್ನು ಕರೆದರು ಸಾಧ್ಯವಿಲ್ಲ ಅದನ್ನು ಹರಿದುಬಂದರೆ ಸಮಾಜದ ಋಣ ತೀರಿಸಿ ದಂತಾಗುತ್ತದೆ ಎಂದರು.
ನೊಳಂಬ ಸಮಾಜದವರು ಸಹ 2ಎ ಮೀಸಲಾತಿ ಗಾಗಿ ನಮ್ಮೊಂದಿಗೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಅದೇ ರೀತಿ ಒಳಪಂಗಡಗಳು ಒಗ್ಗಟ್ಟಾಗಿ ಮೀಸಲಾತಿ ಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಅಜಯ್ ಕುಮಾರ್,ಸೋಗಿ ಶಾಂತಕುಮಾರ್, ಎಸ್ ಓಂಕಾರಪ್ಪ, ಅಶೋಕ್ ಗೋಪನಾಳ್, ಕಂಚಿಕೆರೆ ಕೊಟ್ರೇಶ್, ಇನ್ನಿತರರಿದ್ದರು

Leave a Reply

Your email address will not be published. Required fields are marked *

error: Content is protected !!