ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ | ಕೊಟ್ಟಮಾತನ್ನ ಉಳಿಸಿಕೊಳ್ದಿದ್ರೆ ಸಿಎಂ ಬೊಮ್ಮಾಯಿಗೂ ಶಾಪ ಬಿಡುವುದಿಲ್ಲ: ವಿಜಯಾನಂದ ಕಾಶಪ್ಪನವರ್

ದಾವಣಗೆರೆ: 2ಎ ಮೀಸಲಾತಿಗಾಗಿ ಶ್ರೀಗಳನ್ನು ಪಾದಯಾತ್ರೆ ಮಾಡುವಂತೆ ಮಾಡಿ ಅವರ ಶಾಪದಿಂದ ಬಿಎಸ್‌ವೈ ಅಧಿಕಾರ ಕಳೆದುಕೊಂಡರು. ಈಗ ಬೊಮ್ಮಾಯಿ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಇವರಿಗೂ ಶಾಪ ತಪ್ಪಿದ್ದಲ್ಲ ಎಂದು ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದರು.
ಶ್ರೀಗಳಿಗೆ ಪಾದಯಾತ್ರೆ ಮಾಡುವಂತೆ ಮಾಡಿದರೂ ಸಹ ಕೊಟ್ಟ ಮಾತನ್ನು ಬಿಎಸ್‌ವೈ ಉಳಿಸಿಕೊಳ್ಳಲಿಲ್ಲ. ಅದೇ ಕಾರಣಕ್ಕೆ, ಶ್ರೀಗಳ ಪಾದಯಾತ್ರೆ ಶಾಪ ಅವರಿಗೆ ತಟ್ಟಿತು. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಯಾರಾದರೂ ಸರಿ ಅವರಿಗೆ ಶಾಪ ತಟ್ಟದೆ ಬಿಡುವುದಿಲ್ಲ. ಈಗ ಬೊಮ್ಮಾಯಿ ಅವರು ಮಾತನ್ನು ಉಳಿಸಿಕೊರ್ಳಳದಿದ್ದರೆ ಇವರಿಗೂ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಚನಾನಂದ ಸ್ವಾಮೀಜಿ ಸಾಫ್ಟ್‌ವೇರ್, ನಾವು ಹಾರ್ಡ್ ವೇರ್, ಅವರು ಎಸಿ ರೂಮ್‌ನಲ್ಲಿ ಕೂತು ಹೋರಾಟ ಮಾಡುತ್ತಾರೆ. ನಾವು ಬಿಸಿಲಲ್ಲಿ ಹೋರಾಟ ಮಾಡುತ್ತೇವೆ. ಅವರು ಹೋರಾಟಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಯಾವಾಗ ಹೋಗುತ್ತಾರೋ ಆವಾಗ ಬಿಳ್ಕೋಡುಗೆ ಕೊಡುತ್ತೇವೆ. ಹೋರಾಟಕ್ಕೆ ಬಂದಿದ್ದರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವಚನಾನಂದ ಸ್ವಾಮೀಜಿಗೆ ಟಾಂಗ್ ಕೊಟ್ಟರು.
[30/09, 5:02 pm] Kavya Nagaravani: ಕೊಟ್ಟಮಾತನ್ನ ಉಳಿಸಿಕೊಳ್ದಿದ್ರೆ ಸಿಎಂ ಬೊಮ್ಮಾಯಿಗೂ ಶಾಪ ಬಿಡುವುದಿಲ್ಲ: ವಿಜಯಾನಂದ ಕಾಶಪ್ಪನವರ್
