ಪರೀಕ್ಷೆ ಭಯ ನಿವಾರಣೆ ಮತ್ತು ಜ್ಞಾನ ಶಕ್ತಿ ಹೆಚ್ಚಿಸುವಿಕೆ ಕುರಿತು ಮಕ್ಕಳಿಗೆ ಕಾರ್ಯಗಾರ.

ಜಗಳೂರು :- ತಾಲೂಕಿನ ಬಸವನ ಕೋಟೆ ಗ್ರಾಮದ ಬೊಮ್ಮಲಿಂಗೇಶ್ವರ ಪ್ರೌಢಶಾಲಾ ಮಕ್ಕಳಿಗೆ ಪ್ರೇರಣ ಸಮಾಜ ಸೇವಾ ಸಂಸ್ಥೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತಪಸ್ಸು ಟ್ರಸ್ಟ್ ವತಿಯಿಂದ ಸೋಮವಾರ ಪರೀಕ್ಷಾ ಭಯ ನಿವಾರಣೆ ಮತ್ತು ಜ್ಞಾನ ಶಕ್ತಿ ಹೆಚ್ಚಿಸುವಿಕೆ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಇದೆ ವೇಳೆ ಪ್ರೇರಣೆ ಸಮಾಜ ಸೇವ ಸಂಸ್ಥೆ ನಿರ್ದೇಶಕ ಫಾದರ್ ವಿಲಿಯಂ ಮಿರಾಂದ ರವರು ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು ಎಲ್ಲಾ ಮಕ್ಕಳಿಗೆ ಬುದ್ಧಿಶಕ್ತಿ ದೇವರು ಕೊಟ್ಟಿರುತ್ತಾರೆ. ಆದರೆ ಅದನ್ನ ಸರಿಯಾದ ರೀತಿಯಲ್ಲಿ ಉಪಯೋಗಿಸುವ ವಿಧಾನ ತಿಳಿಯದೆ ಅನೇಕ ಸಲ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ಹೆಚ್ಚಾಗಿ ಅಂತಿಮ ಪರೀಕ್ಷೆಯ ವೇಳೆ ತುಂಬಾ ಮಾನಸಿಕ ಒತ್ತಡದಲ್ಲಿರುತ್ತಾರೆ. ಇಂತಹ ಒತ್ತಡಕ್ಕೆ ಒಳಗಾಗದೆ, ಸುಲಭವಾಗಿ ಅಭ್ಯಾಸ ಮಾಡುವ ವಿಧಾನ ಕಲಿತರೆ, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸ ಬಹುದು ಎಂದರು.
ಇದೇ ವೇಳೆ ಆಧ್ಯಾತ್ಮಿಕ ಚಿಂತಕರು ಎನ್. ಮಂಜುನಾಥ್ ಅವರು ಮನಸ್ಸಿನ ಏಕಾಗ್ರತೆ ಹಾಗೂ ಸರಳ ರೀತಿಯ ಅಧ್ಯಯನ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತರಬೇತಿ ತಿಳಿಸಿದರು.
ಈ ಸಂಧರ್ಭಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎನ್.ಮಂಜುನಾಥ, ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಡಿ. ಅಬ್ದುಲ್ ರಖೀಬ್ , ಕ.ರ.ವೆ. ಘಟಕ ಗ್ರಾಮ ಘಟಕದ ಅಧ್ಯಕ್ಷ ಗಿರೀಶ್, , ಶಿಕ್ಷಕರಾದ ಕೆ.ಹೆಚ್. ಬಸವರಾಜ , ತಪಸ್ಸು ಟ್ರಸ್ಟ್ ಪದಾಧಿಕಾರಿಗಳು ಶಿಕ್ಷಕರು ಉಪಸ್ಥಿತರಿದ್ದರು.
